ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
Advertisement
ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ್ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನನಗೆ ಯಾವುದೇ ಪತ್ರ ಬಂದಿಲ್ಲ. ಉತ್ತರಕರ್ನಾಟಕ ಭಾಗಕ್ಕೆ 5 ಕಾರ್ಖಾನೆಗಳನ್ನು ಕೊಡು ತ್ತಿದ್ದೇವೆ. ಗದಗ ಜಿಲ್ಲೆಯೊಂದಕ್ಕೇ ಕುಡಿಯುವ ನೀರಿಗೆ 1,500 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ ಎಂದು ಟಾಂಗ್ ಕೊಟ್ಟರು.
ಅನುದಾನ ಎಷ್ಟು? ಈ ಬಾರಿ ಸರಿ ಸುಮಾರು 200 ಕೋಟಿ ರೂ. ಅನುದಾನ ಕೊಟ್ಟಿರಬಹುದು ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು. ನಡಹಳ್ಳಿಗೆ ಕೆಲ್ಸ ಇಲ್ಲ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ನಡಹಳ್ಳಿ ಹೇಳಿಕೆಗೆ ತಿರುಗೇಟು ನೀಡಿದ
ಮುಖ್ಯಮಂತ್ರಿ, ನಡಹಳ್ಳಿಗೆ ಬೇರೆ ಕೆಲಸ ಇಲ್ಲ. ಅದಕ್ಕೆ ಹೀಗೆಲ್ಲ ಮಾತಾಡ್ತಿದ್ದಾರೆ. ಅವ್ರಿಗೆ ಉತ್ತರ ಕರ್ನಾಟದ ಬಗ್ಗೆ ಕಮಿಟೆ¾ಂಟ… ಇದ್ರೆ ತಾನೇ. ಅವ್ರು ಬೇಕ್ ಬೇಕಾದಂಗೆ ಪಕ್ಷಾತರ ಮಾಡಿಕೊಂಡು ಓಡಾಡವ್ರು ಎಂದು ತೀಕ್ಷ್ಣವಾಗಿ ನುಡಿದರು.