Advertisement

ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆಗೆ ಸಿದ್ಧ

12:02 PM Jul 22, 2017 | |

ಧಾರವಾಡ: ರಾಜ್ಯದಲ್ಲಿರುವ ಒಳನಾಡು ಮತ್ತು ಹೊರನಾಡು ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಮುಂದಾಗಲಿದೆ ಎಂದು ಸಂಘದ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು.

Advertisement

ನಗರದ ಕವಿಸಂನಲ್ಲಿ ಸಂಘದ 128ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ 50  ವರ್ಷಗಳಿಗೆ ಮೇಲ್ಪಟ್ಟು ಕನ್ನಡಕ್ಕಾಗಿ ಶ್ರಮಿಸಿದ ಹೊರನಾಡು-ಒಳನಾಡು ಕನ್ನಡ ಸಂಘಗಳಿಗೆ ಗೌರವ-ಸನ್ಮಾನ ನೀಡಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಮತ್ತು ಹೊರನಾಡು ಕನ್ನಡಿಗರ ಮನೆ- ಮನಗಳಲ್ಲಿ ನಿರಂತರ ಜಾಗೃತಿ ಮೂಡಿಸಿ ಕನ್ನಡ-ಕನ್ನಡಿಗ-ಕರ್ನಾಟಕದ ವಿಕಾಸದ ಆಸೆಯಗಳಿಗೆ ಸ್ಪಂದಿಸಲು ಗಮನ ಹರಿಸಲಾಗುವುದು ಎಂದರು. 

ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆ ಆದಾಗ ಕನ್ನಡಪರ ಹೋರಾಟಗಳಿಗೆ ಬಹುದೊಡ್ಡ ಶಕ್ತಿ ಬರುತ್ತದೆ. ಉಸಿರು ಇರುವ ತನಕ ತಾವು ಕನ್ನಡ ಭಾಷೆ, ನೆಲ, ಜಲಗಳ ಉಳಿವಿಗಾಗಿ ನಿರಂತರ ಹೋರಾಟ ಮಾಡುವುದಾಗಿ ಹೇಳಿದ ಪಾಪು, ಕನ್ನಡಪರ ಸಂಘಟನೆಗಳ ಒಕ್ಕೂಟ ರಚನೆಯಾದಲ್ಲಿ ಅದರ ಸಾರಥ್ಯ ವಹಿಸಲು ಕವಿಸಂ ಹಾಗೂ ತಾವು ಸದಾ ಸಿದ್ಧ ಎಂದರು.

ಇದೇ ಸಂದರ್ಭದಲ್ಲಿ ಪುಣೆಯ ಕರ್ನಾಟಕ ಸಂಘ, ಮುಂಬಯಿಯ ಕರ್ನಾಟಕ ಸಂಘ, ಪುಣೆಯ ಕನ್ನಡ ಸಂಘ, ಅಂಬರನಾಥ ಕರ್ನಾಟಕ ವೈಭವ ಸಂಸ್ಥೆ, ಬರೋಡಾದ  ಕರ್ನಾಟಕ ಸಂಘ, ಮಂಡ್ಯದ ಕರ್ನಾಟಕ ಸಂಘ, ಕಾಂತಾವರದ ಕನ್ನಡ ಸಂಘ, ಶಿವಮೊಗ್ಗದ ಕರ್ನಾಟಕ ಸಂಘ, ರಾಯಚೂರಿನ ಕರ್ನಾಟಕ ಸಂಘ, ಡಯಟ್‌ ಹಾಗೂ ಜೀವನ  ಶಿಕ್ಷಣ ಮಾಸಪತ್ರಿಕೆ ಸಂಸ್ಥೆಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಗೌರವ ಸ್ವೀಕರಿಸಿದ ಮಂಡ್ಯದ ಜಯಪ್ರಕಾಶಗೌಡ, ಜೀವನ ಶಿಕ್ಷಣ ಮಾಸಪತ್ರಿಕೆಯ ಗುರುಮೂರ್ತಿ ಯರಗಂಬಳಿಮಠ, ರಾಯಚೂರಿನ ಮುರಳೀಧರ ಕುಲಕರ್ಣಿ, ಅಂಬರನಾಥನ್‌, ಆರ್‌.ಬಿ. ಹೆಬ್ಬಳ್ಳಿ, ಕೆ.ಆರ್‌. ಮಮದಾಪುರ ಮಾತನಾಡಿದರು.

Advertisement

ಶಿವಶಂಕರ ಹಿರೇಮಠ, ಗಂಗಪ್ಪ, ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಗೌರವ ಉಪಾಧ್ಯಕ್ಷ ಪ್ರೊ|ಐ.ಜಿ.ಸನದಿ, ಮೋಹನ ನಾಗಮ್ಮನವರ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ ಇದ್ದರು. ಕೃಷ್ಣ ಜೋಶಿ ಸ್ವಾಗತಿಸಿದರು. ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಗುರು ತಿಗಡಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next