Advertisement

ಪುಸ್ತಕ ಓದುವುದರಿಂದ ನಮ್ಮ ಏಕಾಗ್ರತೆ ಹೆಚ್ಚುತ್ತದೆ: ಅಶೋಕ್‌

03:19 PM Apr 24, 2017 | Team Udayavani |

ಬಂದರು: ನಾವು ಪುಸ್ತಕ ಓದುವುದರಿಂದ ನಮ್ಮ ಏಕಾಗ್ರತೆ ಹೆಚ್ಚುವ ಜತೆಗೆ ತಾಳ್ಮೆಯೂ ಬೆಳೆಯುತ್ತದೆ. ಜತೆಗೆ ಪುಸ್ತಕ ನಮ್ಮನ್ನು ಸಾಹಿತಿಯಾಗಿ ಬೆಳೆಸುದರಿಂದ ಒಂದಷ್ಟು ಮಂದಿ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ. ಹೀಗಾಗಿ ನಾವು ಪುಸ್ತಕ ಕಷ್ಟವಾದರೆ ಕನಿಷ್ಠ ದಿನಪತ್ರಿಕೆಗಳನ್ನಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕಾಸರಗೋಡು ಅಶೋಕ್‌ಕುಮಾರ್‌ ಹೇಳಿದರು. 

Advertisement

ಅವರು ನಗರದ ಬಂದರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮಂಗಳೂರು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಸಹಯೋಗದಲ್ಲಿ ರವಿವಾರ ನಡೆದ ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಒಬ್ಬ ಸಾಹಿತಿಗೆ ನಿರಂತರ ಓದು ಅಗತ್ಯ. ಆದರೆ ಇಂದು ಕನಿಷ್ಠ ಓದಿ ದೊಡ್ಡ ಸಾಹಿತಿ ಗಳಾಗಲು ಪ್ರಯತ್ನಿಸುತ್ತಾರೆ. ಇಂತಹ ಅಹಂನಿಂದ ಹೊರಬರುವುದು ಅತಿ ಅಗತ್ಯ. ನಾವು ಮಕ್ಕಳ ಓದಿನ ಅವಲೋಕನ ಮಾಡಬೇಕಾಗುತ್ತದೆ. ಇಲ್ಲದೇ ಇದ್ದಾಗ ಅವರು ಓದಿಯೂ ಪ್ರಯೋಜನ ಇಲ್ಲ ದಂತಾಗುತ್ತದೆ. ಪುಸ್ತಕ ಎಂದೆಂದಿಗೂ ನಮ್ಮ ಮಾರ್ಗದರ್ಶಕ ಎಂಬ ಅರಿವು ನಮ್ಮಲ್ಲಿರಬೇಕು ಎಂದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಯ ರಿಜಿಸ್ಟ್ರಾರ್‌ ಡಾ| ಬಿ. ದೇವದಾಸ ಪೈ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿ ಯಲ್ಲಿ ಕವಿಗಳಾದ ವಿಘ್ನೇಶ್‌ ಭಿಡೆ, ಜೆ.ಎಫ್‌. ಡಿ’ಸೋಜಾ, ಡಾ| ಸುರೇಶ್‌ ನೆಗಳಗುಳಿ, ತಾರಾನಾಥ್‌ ಬೋಳಾರ್‌, ಮಾಲತಿ ಶೆಟ್ಟಿ ಮಾಣೂರು, ಗುಣವತಿ ಕಿನ್ಯಾ, ಚಂದ್ರಶೇಖರ್‌ ಬೋಳಾರ್‌ ತಮ್ಮ ಚುಟುಕುಗಳನ್ನು ವಾಚಿಸಿದರು. ಪುಸ್ತಕ ಮಾರಾಟ ಮಳಿಗೆಯ ಪ್ರತಿನಿಧಿ ಮಾರ್ಸೆಲ್‌ ಎಂ. ಡಿ’ಸೋಜಾ ಸ್ವಾಗತಿ, ಸುರೇಖಾ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next