Advertisement
ಸ್ಮಾರ್ಟ್‌ಫೋನ್‌ನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆಫೆ. 26ರಂದು ಇ-ಪುಸ್ತಕ ಓದುವ ಯೋಜನೆಗೆ ಚಾಲನೆ ನೀಡಿತ್ತು. ಇದಕ್ಕಾಗಿ ಕರ್ನಾಟಕ ಸರಕಾರದ ಲೋಗೋ ಹೊಂದಿರುವ ಇ-ಸಾರ್ವಜನಿಕ ಗ್ರಂಥಾಲಯ ಎಂಬ ಆ್ಯಪ್‌ನ್ನು ಸಿದ್ಧಪಡಿಸಲಾಗಿತ್ತು. ಮೊದಲ ಒಂದೂವರೆ ತಿಂಗಳ ಅವಧಿಯಲ್ಲಿ ಒಟ್ಟು 16,500ಕ್ಕೂ ಹೆಚ್ಚು ಮಂದಿ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲೂ ಲಾಕ್‌ಡೌನ್ ಆರಂಭವಾದ ಮಾ. 22ರ ಅನಂತರ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕೆಲವರಿಗೆ ಮನೆಯಲ್ಲೇ ಕೆಲಸ ನಿರ್ವಹಿಸಲು ಅವಕಾಶ ವಿದ್ದರೆ, ಇನ್ನು ಕೆಲವರಿಗೆ ರಜೆ ನೀಡಲಾಗಿದೆ. ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕೆಲವರು ಪುಸ್ತಕ ಗಳನ್ನು ಓದುತ್ತಿದ್ದಾರೆ. ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್‌ನಲ್ಲಿ ಬುದ್ಧಿ ಮತ್ತೆಯನ್ನು ಪ್ರಚೋದಿಸುವ ಎಲ್ಲ ರೀತಿಯ ಪುಸ್ತಕಗಳು ಲಭ್ಯವಿವೆ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು, ಸ್ಪರ್ಧಾತ್ಕಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಪಠ್ಯ, ಕನ್ನಡ, ಇಂಗ್ಲಿಷ್ ಸಹಿತ ಹಲವು ಭಾಷೆಗಳ ಕ್ಲಾಸಿಕ್ ಕಾದಂಬರಿಗಳು- ಹೀಗೆ ಎಲ್ಲ ಓದುಗರಿಗೆ ಬೇಕಾದ ಇ-ಪುಸ್ತಕಗಳು ಈ ಆ್ಯಪ್‌ನಲ್ಲಿ ಇವೆ. ಆ್ಯಪ್ ಬಳಕೆ ಹೆಚ್ಚುತ್ತಿದೆ
ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್ ಪರಿಚಯಿಸಿದ ಮೇಲೆ ಒಂದೂವರೆ ತಿಂಗಳಿನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರ ಸಂಖ್ಯೆ ಹೆಚ್ಚಿದೆ. ಲಾಕ್‌ಡೌನ್ ಅವಧಿಯಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಬಳಕೆ ಹೆಚ್ಚುತ್ತಿರುವುದನ್ನು ನೋಡಿದಾಗ ಇದು ಕನ್ನಡ ಪುಸ್ತಕೋದ್ಯಮಕ್ಕೂ ಹೊಸದಾದ ಆಲೋಚನೆ ಮಾಡಲು ಸದವಕಾಶ ಎನ್ನುವುದು ನನ್ನ ಭಾವನೆ.
-ಎಸ್. ಸುರೇಶ್‌ಕುಮಾರ್
ಶಿಕ್ಷಣ ಸಚಿವ