Advertisement
ರಾಷ್ಟ್ರ, ಧರ್ಮವನ್ನು ಕಟ್ಟುವ ನಿಟ್ಟಿನಲ್ಲಿ ಶಿವಾಜಿ ಆದರ್ಶಗಳು ಮಾದರಿಯಾಗಿವೆ. ನಾಯಕತ್ವಕ್ಕೆ ರೂಪಿಸುವುದಕ್ಕೆ ಶಿವಾಜಿಯ 22 ಸೂತ್ರಗಳು ಉತ್ತಮ ಕೃತಿಯಾಗಿದ್ದು, ಶಿವಾಜಿಯ ಆಡಳಿತದ ಒಟ್ಟು ದಾಖಲೆಯಾಗಿದೆ. ಈ ಕೃತಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆ ಬರೆದಿದ್ದು, ದೇಶದ ಸಮಸ್ಯೆ, ಆರ್ಥಿಕ ನೀತಿ, ಕೃಷಿತತ್ವ ಇತರೆ ಎಲ್ಲಾ ಮಾಹಿತಿಗಳು ಕೃತಿಯಲ್ಲಿ ಅಡಗಿವೆ ಎಂದು ಹೇಳಿದರು.
Related Articles
Advertisement
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣದ ಗಜಾನನ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಪಾಲಿಕೆ ಸದಸ್ಯೆ ಶೋಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಕೃಷ್ಣೋಜಿರಾವ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
14ಕ್ಕೆ ರಣರಂಗಕ್ಕೆ ಇಳಿದು 19ಕ್ಕೆ ಕೋಟೆ ಕಟ್ಟಿದ ಶಿವಾಜಿ: ಸರ್ಕಾರ ಕಳೆದ ಹತ್ತು ವರ್ಷದಿಂದ ಶಿವಾಜಿ ಸಾಧನೆ ಗುರುತಿಸುವ ಕಾರ್ಯ ಮಾಡುತ್ತಿದೆ. 14ನೇ ವಯಸ್ಸಿಗೆ ರಣರಂಗಕ್ಕೆ ಇಳಿದು 19ನೇ ವಯಸ್ಸಿಗೆ ಕೋಟೆಯೊಂದನ್ನು ಕಟ್ಟುತ್ತಾನೆ. 35ವರ್ಷಗಳ ಕಾಲ ಯುದ್ಧನಿರತನಾಗಿ ಸ್ವರಾಜ್ಯ ಕಟ್ಟುತ್ತಾನೆ. ಶಿವಾಜಿ ಆತ್ಮಭಿಮಾನಿಯಾಗಿದ್ದ ಹೊರತು ಆಹಂಕಾರಿಯಾಗಿರಲಿಲ್ಲ ಎಂದು ಚಿಂತಕ ಪ್ರೊ.ಎಸ್.ಶಿವಾಜಿ ಜೋಯಿಸ್ ಸ್ಮರಿಸಿದರು.
ಅದ್ಧೂರಿ ಮೆರವಣಿಗೆ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತ್ಯುತ್ಸವ ಮೆರವಣಿಗೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆಯೂ ದೇವಸ್ಥಾನದಿಂದ ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ರಸ್ತೆ ಮಾರ್ಗವಾಗಿ ಕಲಾಮಂದಿರ ತಲುಪಿತು.
ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ವೇಷಧಾರಿ, ಕುದುರೆಯ ಮೇಲೆ ಕುಳಿತು, ಕೈಯಲ್ಲಿ ಖಡ್ಗ ಹಿಡಿದು ಸಾಗುವ ದೃಶ್ಯ ಶಿವಾಜಿಯನ್ನೇ ಹೋಲುವಂತಿತ್ತು, ವೇಷಧಾರಿಗಳಾಗಿದ್ದ ಚಿಣ್ಣರೂ ಇದಕ್ಕೆ ಸಾಥ್ ನೀಡಿದರು. ಮಾಜಿ ಸಚಿವ ಎಚ್.ವಿಶ್ವನಾಥ್, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಜಯಂತ್ಯುತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್.ಗೋಪಾಲ್ ರಾವ್ ಜಾದವ್, ಪ್ರಧಾನ ಕಾರ್ಯದರ್ಶಿ ಕೆ.ನಾಗೇಂದ್ರ ಅವತಾಡೆ, ಎಂ.ಜೆ.ಗಾರ್ಗೆ, ಖಜಾಂಚಿ ಎಸ್.ವೆಂಕೋಬ ರಾವ್ ಕಿರದಂತ್, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟೆR ಇತರರಿದ್ದರು.