Advertisement

ನೆಹರೂ ಚರಿತ್ರೆ ಓದಿ: ಭಾಸ್ಕರ್ 

10:24 AM Nov 15, 2017 | Team Udayavani |

ಪುತ್ತೂರು: ಆಗರ್ಭ ಶ್ರೀಮಂತರ ಮನೆಯಲ್ಲಿ ಹುಟ್ಟುವ ಜವಾಹರ್‌ಲಾಲ್‌ ನೆಹರೂ, ದೇಶಕ್ಕಾಗಿ ಒಂಬತ್ತು ಬಾರಿ ಜೈಲಿಗೆ ಹೋಗುತ್ತಾರೆ. ಆದರೆ ಜೈಲಿಗೆ ಹೋಗದ ಬಿಜೆಪಿ, ಹಿಂದೂ ಮಹಾಸಭಾದ ಮುಖಂಡರು ನೆಹರೂ ವಿರುದ್ಧ ಆರೋಪಗಳನ್ನು ಮಾಡುತ್ತಾರೆ. ಇವರ ಆರೋಪಗಳಿಗೆ ಉತ್ತರ ನೀಡಬೇಕಾದರೆ, ನೆಹರೂ ಅವರ ಚರಿತ್ರೆಯನ್ನು ಸರಿಯಾಗಿ ಓದಬೇಕು ಎಂದು ವಕೀಲ ಭಾಸ್ಕರ್‌ ಕೋಡಿಂಬಾಳ ಹೇಳಿದರು.

Advertisement

ಪುತ್ತೂರು ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಜವಾಹರ್‌ಲಾಲ್‌ ನೆಹರೂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ದೇಶ ವಿಭಜನೆ ಮಾಡಿದರು ಎಂಬ ಕಾರಣಕ್ಕೆ ನೆಹರೂ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ವಾಸ್ತವ ಹಾಗಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಹರಿಸಿಂಗ್‌ ಆಳ್ವಿಕೆಯ ಕಾಶ್ಮೀರ ಸೇರಿದಂತೆ ಗೋವಾ ಮೊದಲಾದ ಪ್ರಾಂತ್ಯಗಳು ದೇಶದ ಭಾಗವಾಗಿರಲಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂಬ ಆಗ್ರಹವನ್ನು ಮಹಮ್ಮದ್‌ ಆಲಿ ಜಿನ್ನಾ ಮಾಡಿದರು. ಈ ಸಂದರ್ಭ ಕಾಶ್ಮೀರ ಸೇರಿದಂತೆ ಇತರ ರಾಜ್ಯಗಳನ್ನು ಭಾರತದೊಳಗೆ ವಿಲೀನ ಮಾಡುವಲ್ಲಿ ನೆಹರೂ ಶ್ರಮಿಸಿದ್ದರು. ನೆಹರೂ ಇಲ್ಲದೇ ಇರುತ್ತಿದ್ದರೆ ಕಾಶ್ಮೀರ ಪ್ರತ್ಯೇಕ ದೇಶ ಅಥವಾ ಪಾಕಿಸ್ಥಾನದ ಭಾಗವಾಗಿ ಇರುತ್ತಿತ್ತು. ಇದನ್ನು ವಿರೋಧ ಸೂಚಿಸುವವರಿಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಪಟೇಲ್‌ ಹೆಸರು ಸೂಚಿಸಿದರು
ಪಾಶ್ಚಾತ್ಯ ಉಡುಪು ಧರಿಸುತ್ತಿದ್ದ ಇವರು, ಮಹಾತ್ಮಾ ಗಾಂಧಿಯ ಸಂಪರ್ಕಕ್ಕೆ ಬಂದ ಬಳಿಕ ದೇಶೀಯ ವಸ್ತುಗಳಿಗೆ ಪ್ರಾಧಾನ್ಯ ನೀಡಿದರು. ಪ್ರಧಾನಿ ಹುದ್ದೆಗೆ ವಲ್ಲಭ ಬಾಯಿ ಪಟೇಲ್‌ ಹೆಸರನ್ನು ನೆಹರೂ ಸೂಚಿಸಿದ್ದರು. ಆದರೆ ಪಟೇಲ್‌ ಅವರು ನೆಹರೂ ಅವರ ಹೆಸರನ್ನೇ ಸೂಚಿಸಿದ ಕಾರಣ, ಪ್ರಧಾನಿ ಹುದ್ದೆಗೆ ಒಪ್ಪಿಕೊಂಡರು. ಬಳಿಕ ಪಂಚವಾರ್ಷಿಕ ಯೋಜನೆ ಮೂಲಕ ಅನ್ನ, ಕೈಗಾರಿಕಾ ಕ್ರಾಂತಿ ಹಾಗೂ ವಿಶ್ವಕ್ಕೆ ಅಲಿಪ್ತ ನೀತಿಯನ್ನು ಪರಿಚಯಿಸಿದವರು. 

ತನ್ನ ಹುಟ್ಟುಹಬ್ಬದ ದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವುದು ಬೇಡ ಎಂದು, ಮಕ್ಕಳ ದಿನವನ್ನಾಗಿ ಘೋಷಿಸಿದರು. ನೆಹರೂ ಅವರ ಶ್ರಮದಿಂದ ನಾವಿಂದು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದರು.

Advertisement

ಕೆಪಿಸಿಸಿ ಕಾರ್ಯದರ್ಶಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಉಸ್ತುವಾರಿ ಸವಿತಾ ರಮೇಶ್‌, ಪುಡಾ ಅಧ್ಯಕ್ಷ ಕೌಶಲ್‌ ಪ್ರಸಾದ್‌ ಶೆಟ್ಟಿ, ಮುಖಂಡರಾದ ಮಹೇಶ್‌ ರೈ ಅಂಕೊತ್ತಿಮಾರ್‌, ವೇದನಾಥ ಸುವರ್ಣ, ಜೋಕಿಂ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣಪ್ರಸಾದ್‌ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಗಾಂಧಿ ತತ್ತ್ವ ಪಸರಿಸಿದರು 
ಅಧ್ಯಕ್ಷತೆ ವಹಿಸಿದ್ದ ಮಹಮ್ಮದ್‌ ಬಡಗನ್ನೂರು ಮಾತನಾಡಿ, ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಇವರ ಶ್ರಮದಿಂದ ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಬಲಿಷ್ಠವಾಗಿವೆ. ಕಟ್ಟ ಕಡೆಯ ವ್ಯಕ್ತಿಗೂ ಪ್ರಥಮ ಆದ್ಯತೆ ನೀಡುವಂತಾಯಿತು. ಗಾಂಧಿ ತತ್ತ್ವನ್ನು ಮನೆ ಮನೆಗೆ ತಲುಪಿಸಿದ ದಾರ್ಶನಿಕ ಜವಾಹರ್‌ಲಾಲ್‌ ನೆಹರೂ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next