Advertisement
ಈ 20 ವರ್ಷಗಳಲ್ಲಿ ಅಮೆರಿಕ ಅಫ್ಘಾನಿಸ್ತಾನದ ಸೇನೆಗೆ ತರಬೇತಿ ನೀಡುವುದರಲ್ಲೇ ಸಮಯ ಸವೆ ಸಿತು. ಆದರೆ, ದೇಶ ನಿರ್ಮಾಣ ವಿಚಾರದಲ್ಲಿ ಸಂಪೂ ರ್ಣವಾಗಿ ತನ್ನ ಪಾತ್ರ ಮರೆತ ಅಮೆರಿಕ, ಈಗ ಮತ್ತೆ ತಾಲಿಬಾನ್ ಉಗ್ರರ ಕೈಗೇ ದೇಶವನ್ನು ಒಪ್ಪಿಸಿ ಹೋದಂತಾಗಿದೆ. ಸೋಮವಾರ ಮಧ್ಯರಾತ್ರಿ ಅಮೆರಿ ಕದ ಯೋಧರನ್ನು ಹೊತ್ತಕಡೇ ಯುದ್ಧ ವಿಮಾನ ಸಿ17 ಕಾಬೂಲ್‌ನ ಹಮೀದ್ ಕಜೈì ಅಂತಾರಾಷ್ಟ್ರೀಯ ನಿಮಾನ ನಿಲ್ದಾಣದಿಂದ ವಾಪಸ್ ಹೋಯಿತು. ಇದ ರಲ್ಲಿ ಕಡೆಯವರಾಗಿ ಮೇಜರ್ ಜನರಲ್ ಕ್ರಿಸ್ ಡೋನಾಹ್ ಮತ್ತು ರಾಯಭಾರಿ ರೋಸ್ ವಿಲ್ಸನ್ ಪ್ರಯಾಣ ಬೆಳೆಸಿದರು.
Related Articles
Advertisement
ಅಮೆರಿಕದ ಯುದ್ಧ ವಿಮಾನ ಹೋಗುತ್ತಿದ್ದಂತೆ, ಕಾಬೂಲ್‌ನ ಹಮೀದ್ ಕಜೈì ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದ ತಾಲಿಬಾನ್ ಉಗ್ರರು, ಕುಣಿದು ಕುಪ್ಪಳಿಸಿ ದರು. ಅಮೆರಿಕ ಬಿಟ್ಟು ಹೋದ, ಯುದ್ಧ ವಿಮಾನಗಳು, ಹೆಲಿಕಾ ಪ್ಟರ್‌ಗಳು, ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದರು. ಅಷ್ಟೇ ಅಲ್ಲ, ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತು ಸಂಭ್ರಮಿಸಿದರು. ಈ ಮಧ್ಯೆ, ತಾಲಿಬಾನ್‌ನ ಅತ್ಯಂತ ನುರಿತ ಪಡೆ, ಬದ್ರಿ ಘಟಕವು ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಉನ್ನತ ಮಟ್ಟದ ಸಮಿತಿ
ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಬಗ್ಗೆ ಗಮನ ಹರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಮಿತಿ ರಚಿಸಿ ದ್ದಾರೆ. ಈ ಸಮಿತಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದಾರೆ. ಅಫ್ಘಾನಿಸ್ತಾನದಲ್ಲಿ ಬಾಕಿ ಉಳಿದಿ ರುವ ಭಾರತೀಯರನ್ನು ವಾಪಸ್ ಕರೆತರುವುದು, ಹಾಗೆಯೇ ಅಲ್ಲಿ ಉಳಿದಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ವಾಪಸ್ ತರುವ ಬಗ್ಗೆ ಚರ್ಚೆಯಾಗಿದೆ.ಅಲ್ಲದೆ, ಆಫ^ನ್‌ಭೂಮಿಯನ್ನು ಬೇರೆದೇಶಗಳು ತಮ್ಮ ಹಿತಾಸಕ್ತಿಗಾಗಿ ಬಳಕೆ ಮಾಡದಂತೆ ನೋಡಿಕೊಳ್ಳುವುದು ಬೇಗೆ ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.