Advertisement

ಕಲಿಕಾಮಟ್ಟ ಹೆಚ್ಚಿಸಲು ‘ಓದು ಕರ್ನಾಟಕ’ಕಾರ್ಯಕ್ರಮ

01:04 PM Aug 14, 2019 | Suhan S |

ಗಜೇಂದ್ರಗಡ: ಪಟ್ಟಣದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ‘ಓದು ಕರ್ನಾಟಕ’ ಕಾರ್ಯಕ್ರಮ ನಡೆಯಿತು.

Advertisement

ಈ ವೇಳೆ ಸಿಆರ್‌ಪಿ ಎ.ಬಿ. ವಣಗೇರಿ ಮಾತನಾಡಿ, ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಿಕಾಮಟ್ಟ ಉತ್ತಮಗೊಳಿಸಲು ಓದು ಕರ್ನಾಟಕ ಕಾರ್ಯಕ್ರಮ ಶಿಕ್ಷಣ ಇಲಾಖೆ ಅನುಷ್ಠಾನಕ್ಕೆ ತಂದಿದೆ. 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಸರಳ ಗಣಿತ, ಉರ್ದು ಪರಿಸರ ವಿಷಯ ಪ್ರತ್ಯೇಕ ಪುಸ್ತಕಗಳಿಂದ 60 ದಿನದವರೆಗೆ ತರಬೇತಿ ನೀಡಲಾಗುವುದು. ಕಾಗುಣಿತ, ಒತ್ತಕ್ಷರ, ಪದ, ವಾಕ್ಯ ರಚನೆ, ಕಥೆ ಓದುವಿಕೆ ವಿಭಾಗಗಳನ್ನು ಒಳಗೊಂಡಿದೆ. ಕಲಿಕಾ ಮಟ್ಟ ಗುರುತಿಸಿ ಬೋಧನೆ, ಪ್ರತ್ಯೇಕ ವಿದ್ಯಾರ್ಥಿಗಳ ಗುಂಪು ರಚಿಸಿ ಬೋಧನೆ ಮಾಡಲಾಗುವುದು. ಅಂಕಿ ಪರಿಚಯ, ಗಣಿತದ ಮೂಲ ಕ್ರಿಯೆಗಳು ಹೀಗೆ ಮಕ್ಕಳಿಗೆ ಸರಳವಾಗಿ ಮನ ಮುಟ್ಟುವ ರೀತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡಲಾಗುವುದು. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದರು.

ಮುಖ್ಯ ಶಿಕ್ಷಕ ಎ.ಎನ್‌. ರೋಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಕಾರಣಗಳಿಂದಾಗಿ ಕೆಲ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬಿದ್ದಿರುತ್ತಾರೆ. ಅವರಿಗೆ ವಿಷಯ ಮನದಟ್ಟು ಮಾಡಿಸಿ, ಕಲಿಕಾ ಅಂತರ ನಿವಾರಿಸಿ ಓದಿನೆಡೆಗೆ ಪ್ರೋತ್ಸಾಹಿಸುವುದಕ್ಕಾಗಿಯೇ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮುನಶಾದಬೇಗಂ ನಿಶಾನದಾರ, ಜನ್ನತಜಹಾ ಕರಮುಡಿ, ಬಿ.ಟಿ. ಮೋಮಿನ್‌, ಜೆ.ಎ. ಮುಲ್ಲಾ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next