Advertisement
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ಭಾರತವು ವೈವಿಧ್ಯತೆ ಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುವ ಮೂಲಕ ಪ್ರಜಾಪ್ರಭುತ್ವದ ಮೂಲ ಉದ್ದೇಶ ವನ್ನು ಸಾರುತ್ತಿರುವ ಮಾದರಿ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ ಆಳ್ವಿಕೆ. ಸಂವಿಧಾನ ಎಂದರೆ ಹಕ್ಕುಗಳು, ಕರ್ತವ್ಯಗಳು, ತತ್ವಗಳು ಮತ್ತು ಕಾನೂನಿನ ಮೂಲಕ ಪ್ರಜಾ ಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವ ಪವಿತ್ರ ಗ್ರಂಥ. ಈ ಆಶಯದೊಂದಿಗೆ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು “ನಾವು ಭಾರತದ ಜನರು’ ಎಂಬ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚನ ಮಾಡುವ ಮೂಲಕ ವಿಶಿಷ್ಠ ದಾಖಲೆ ನಿರ್ಮಿಸುವ ಕರ್ನಾಟಕ ಸರ್ಕಾರದ ಅಭಿಯಾನ ಒಂದು ಮಹತ್ವದ ಹೆಜ್ಜೆಯಾಗಿದೆ.
Related Articles
Advertisement
ಪೀಠಿಕೆಯಲ್ಲಿರುವ ಭ್ರಾತೃತ್ವ – ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಪ್ರಜೆಗಳಲ್ಲಿರಬೇಕಾದ ಈ ಮನೋಭಾವವನ್ನು ಎತ್ತಿಹಿಡಿಯುತ್ತದೆ. ಈ ಆಶಯವನ್ನು ಒಕ್ಕೊರ ಲಿನಿಂದ ಪ್ರಜೆಗಳಾಗಿ ಪಾಲಿಸಿದಾಗ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ಇದು ನಾಗರಿಕರ ಯೋಗಕ್ಷೇಮದ ಜೊತೆಗೆ ಪ್ರಗತಿಯ ಬದ್ಧತೆಯನ್ನು ಪ್ರತಿಬಿಂಬಿ ಸುತ್ತದೆ.
ನಮ್ಮ ಸಂವಿಧಾನದ ಪೀಠಿಕೆಯು ಪ್ರಜಾ ಪ್ರಭುತ್ವ ವ್ಯವಸ್ಥೆಯ ಆತ್ಮ ಎಂದೇ ಬಿಂಬಿತ ವಾಗಿದೆ. ಇದನ್ನು ಒಪ್ಪಿಕೊಂಡಾಗ ಮಾತ್ರ ನ್ಯಾಯಯುತ, ಶಾಂತಿಯುತ, ಅಭಿವೃದ್ಧಿ ಪೂರಕ ಮಾದರಿ ಸಮಾಜ ನಿರ್ಮಾಣದ ಆಶಯ ಸಾಕಾರಗೊಳ್ಳುತ್ತದೆ.
ಪ್ರಜಾಪ್ರಭುತ್ವದ ಮೌಲ್ಯವನ್ನು ಪ್ರದರ್ಷಿಸುವ ಬದ್ಧತೆಯನ್ನು ಪ್ರಜೆಗಳಾಗಿ ನಾವು ತೋರಿಸಬೇಕಾಗಿ ರುವುದು ನಮ್ಮ ಆದ್ಯ ಕರ್ತವ್ಯ. ನಾಗರಿಕರಾಗಿ ನಾವು ಅಂತರ್ಗತ, ಸಮಾನ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಬೇಕಾಗಿದೆ. ಜಾತಿ, ಸಂಘರ್ಷ ಮತ್ತು ಧರ್ಮಾಧಾರಿತ ರಾಜಕಾರಣ ದೇಶದ ಹಿತಾಸಕ್ತಿಗೆ ಮಾರಕ. ಈ ನಿಟ್ಟಿನಲ್ಲಿ ಪೀಠಿಕೆ ಯನ್ನು ಓದಿ ಅದರ ಮಹತ್ವನ್ನು ಅರಿತುಕೊಳ್ಳು ವುದು ಅತಿ ಮುಖ್ಯ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ಸಂವಿಧಾನದ ಪೀಠಿಕೆ ಓದುವ ಅವಕಾಶ ಒದಗಿ ಬಂದಿರುವುದು ನಮ್ಮ ಸೌಭಾಗ್ಯ.