Advertisement
ಅವರು ಜು. 20ರಂದು ಉಡುಪಿ ನಿಟ್ಟೂರು ಪ್ರೌಢ ಶಾಲೆಯಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ಶಿಷ್ಟಾಚಾರ ಜಾಗೃತಿ ಅಭಿಯಾನ ಹಾಗೂ ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕುಡಿಯ ನೀರು ಮತ್ತು ತ್ಯಾಜ್ಯ ನಿರ್ವಹಣೆ ಭವಿಷ್ಯದ ಭಾರಿ ದೊಡ್ಡ ಸವಾಲುಗಳಾಗುತ್ತವೆ. ನೀರಿಗಾಗಿ ಅಂತರಜಲ ಪೂರಣ ಮತ್ತು ಕಸ ವಿಲೇವಾರಿಗೆ ಹೊಸ ಕ್ರಮವನ್ನು ಅನುರಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ ಎಂದು ಉಡುಪಿ ಜಿ.ಪಂ.ನ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು. ಸ್ವಚ್ಚತೆಗೆ ಸ್ವಯಂ ಶಿಸ್ತು ಅನಿವಾರ್ಯವೆಂದು ಅರಿತಿರುವ ಶಾಲಾ ಮಂಡಳಿ, ಮಕ್ಕಳಿಗೆ ಸ್ವತ್ಛ ಪರಿಸರದ ಕುರಿತಾಗಿ ಕಾಲ ಕಾಲಕ್ಕೆ ಮಾಹಿತಿಯನ್ನು ನೀಡುತ್ತಿದೆ. ಮರು ಬಳಕೆ ಸಾಮಾಗ್ರಿಗಳನ್ನು ಒದಗಿಸುತ್ತಿದೆ. ಶಾಲಾ ವಠಾರವೂ ಸ್ವತ್ಛವಾಗಿರಿಸಲು ನಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೇಕಾರ್ ಹೇಳಿದರು.
Related Articles
Advertisement