Advertisement

ಮರು ಪಾವತಿ ಅವಧಿ ವಿಸ್ತರಣೆ

11:57 PM May 05, 2021 | Team Udayavani |

ಮುಂಬಯಿ:  ಕೊರೊನಾ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಆರ್‌ಬಿಐ ಬಂದಿದೆ. ಬ್ಯಾಂಕ್‌ಗಳ ಸಾಲದ ಹೊರೆಯನ್ನು ಸ್ವಲ್ಪಮಟ್ಟಿಗೆ ಇಳಿಸಲು ಪ್ರಯತ್ನಿಸಿರುವ ಆರ್‌ಬಿಐ, ಬ್ಯಾಂಕ್‌ ಸಾಲಗಳ ಮರುಪಾವತಿ ಅವಧಿ ಯನ್ನು ಎರಡು ವರ್ಷ ಗಳವರೆಗೆ ವಿಸ್ತರಿಸಿದೆ.

Advertisement

25 ಕೋಟಿ ರೂ.ವರೆಗೆ ಸಾಲ ಪಡೆದಿದ್ದು ಆ ಸಾಲವನ್ನು ಈವರೆಗೆ ಮರುಪಾವತಿಸದವರಿಗೆ ಹಾಗೂ 2021ರ ಮಾರ್ಚ್‌ ಹೊತ್ತಿಗೆ “ಸ್ಟಾಂಡರ್ಡ್‌ ಸುಸ್ತಿದಾರರು’ ಎಂಬ ವರ್ಗೀಕರಣಕ್ಕೆ ಒಳಗಾದವರಿಗೆ ಈ ಸೌಲಭ್ಯ ಸಿಗಲಿದೆ. ಆದರೆ ಇದು ಕೇವಲ ಒಮ್ಮೆ ಮಾತ್ರ ಕಲ್ಪಿಸಬಹುದಾದ ಸೌಲಭ್ಯವಾಗಿದ್ದು, ಸುಮಾರು 25 ಕೋಟಿ ರೂ.ವರೆಗಿನ ಸಾಲ ಪಡೆದಿರು ವವರಿಗೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಇದು ಅನ್ವಯವಾಗ ಲಿದೆ. ಇವರಿಗೆ ತಮ್ಮ ಸಾಲದ ನಿಯ ಮಗಳನ್ನು ಮರುರಚಿಸಲು ಅಥವಾ ಸಾಲದ ಕಂತುಗಳ ಮರು ಪಾವತಿ ಅವಧಿ ವಿಸ್ತರಣೆ ಸೌಲಭ್ಯವನ್ನು ನವೀಕರಣಗೊಳಿಸಲು ಅವಕಾಶ ಇರಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

50 ಸಾವಿರ ಕೋಟಿ: ಬ್ಯಾಂಕ್‌ಗಳಿಗೆ ಪ್ರತ್ಯೇಕ ನಿರ್ದೇಶನವೊಂದನ್ನು ನೀಡಿ ರುವ ಆರ್‌ಬಿಐ, ಲಸಿಕೆ ತಯಾರಕರಿಗೆ, ಆಸ್ಪತ್ರೆಗಳಿಗೆ ಹಾಗೂ ಕೊರೊನಾ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶ ದಿಂದ ಸಲ್ಲಿಸಲಾಗಿರುವ ಸಾಲದ ಅರ್ಜಿಗಳಿಗೆ ಸಾಲ ನೀಡಿಕೆ ವೇಳೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದೆ. ಇದಕ್ಕಾಗಿ, ಬ್ಯಾಂಕ್‌ಗಳಿಗೆ 50,000 ಕೋಟಿ ರೂ.ಗಳ ಪ್ರತ್ಯೇಕ ಧನಸಹಾಯವನ್ನು ನೀಡುವುದಾಗಿ ದಾಸ್‌ ತಿಳಿಸಿದ್ದಾರೆ.

ಕೆವೈಸಿ ಅಪ್‌ಡೇಟ್‌ಗೆ ಅವಕಾಶ: ಇನ್ನು, ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಸಲ್ಲಿಸಬೇಕಾದ ಕೆವೈಸಿ ವಿವರಗಳನ್ನು ಸಲ್ಲಿಸಲು ಈ ವರ್ಷದ ಡಿಸೆಂಬರ್‌ವರೆಗೆ ಅವಕಾಶ ಕಲ್ಪಿಸಲಾಗಿದೆ. ಕೆವೈಸಿ ಅಪ್‌ಡೇಟ್‌ ಮಾಡದ ಗ್ರಾಹಕರ ವಿರುದ್ಧ ಯಾವುದೇ ಕ್ರಮಗಳನ್ನು ಜರಗಿಸುವಂತಿಲ್ಲ ಎಂದು ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿರುವುದಾಗಿ ಆರ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next