Advertisement

ಸಕಾರಣವಿಲ್ಲದೆ ತೆಗೆದು ಹಾಕಲಾಗಿದ್ದ ಮತದಾರರ ಹೆಸರು ಮರು ಸೇರ್ಪಡೆ

11:58 PM Mar 01, 2023 | Team Udayavani |

ಬೆಂಗಳೂರು ಕೇಂದ್ರ ಚುನಾವಣ ಆಯೋಗದ ನಿರ್ದೇಶನದಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮರುಪರಿಶೀಲಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಪ್ರತಿಯೊಂದು ಕ್ಷೇತ್ರ ದಲ್ಲೂ ಅಂದಾಜು 20 ಸಾವಿರ ಹೆಸರುಗಳನ್ನು ಸಕಾರಣವಿಲ್ಲದೆ ತೆಗೆದುಹಾಕಿರುವುದನ್ನು ಪತ್ತೆಹಚ್ಚಿದೆ.

Advertisement

ಅಂತಿಮ ಮತದಾರರ ಪಟ್ಟಿಯಲ್ಲಿ 10 ಸಾವಿರ ಹೆಸರುಗಳು ತೆಗೆದುಹಾಕಿದ್ದರೆ (ಅಂದರೆ ಶೇ.4ಕ್ಕಿಂತ ಅಧಿಕ) ಅಂತಹ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಚುನಾವಣ ಆಯೋಗ ನಿರ್ದೇಶಿಸಿತ್ತು.

ಶೇ.4ಕ್ಕಿಂತ ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿರುವ 170 ವಿಧಾನ ಸಭಾ ಕ್ಷೇತ್ರಗಳನ್ನು ಗುರುತಿಸಲಾಗಿತ್ತು. ಆದರೂ ಎಲ್ಲ 224 ಕ್ಷೇತ್ರಗಳಲ್ಲಿ ಜನವರಿ ತಿಂಗಳಲ್ಲಿ ಅಂತಿಮ ಮತದಾರರ ಪಟ್ಟಿ ಮರುಪರಿಶೀಲಿಸುವ ಅಭಿಯಾನ ವನ್ನು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಹಮ್ಮಿಕೊಂಡಿತ್ತು. ಇದರಲ್ಲಿ ಎಲ್ಲ ಕ್ಷೇತ್ರಗಳಲ್ಲೂ 19,900ಕ್ಕೂ ಅಧಿಕ ಹೆಸರುಗಳನ್ನು ತಪ್ಪಾಗಿ ಕೈಬಿಟ್ಟಿರುವುದು ಪತ್ತೆಯಾಗಿದೆ.

ಆಯೋಗದ ನಿರ್ದೇಶನದಂತೆ ಅಂತಿಮ ಮತದಾರರ ಪಟ್ಟಿಯನ್ನು ಮರುಪರಿಶೀಲಿಸಲು ಜಿಲ್ಲಾ ಚುನಾ ವಣಾಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಅದರಂತೆ ಬೂತ್‌ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. 224 ಕ್ಷೇತ್ರಗಳ 42 ಸಾವಿರಕ್ಕೂ ಅಧಿಕ ಮತಗಟ್ಟೆಗಳಲ್ಲಿ ತೆಗೆದು ಹಾಕಲಾಗಿದ್ದ 28 ಲಕ್ಷ ಹೆಸರುಗಳ ಪೈಕಿ 3.50 ಲಕ್ಷಕ್ಕೂ ಅಧಿಕ ನಮೂದುಗಳನ್ನು “ಟೇಬಲ್‌ ಟಾಪ್‌’ ವಿಧಾನದಡಿ ಪರಿಶೀಲಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪಾಗಿ ಅಳಿಸಿಹಾಕಲಾಗಿದ್ದ ಹೆಸರು ಗಳನ್ನು ಮತದಾರರ ಪಟ್ಟಿಗೆ ಮರು ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪಾಗಿ ತೆಗೆದುಹಾಕಲಾದ ಹೆಸರುಗಳ ಸೇರ್ಪಡೆಗೆ ಫಾರಂ 6 ಮತ್ತು ಫಾರಂ 8 ಬಳಸಲಾಗುತ್ತದೆ. ಮತದಾರರ ಅಂತಿಮ ಮತದಾರರ ಪಟ್ಟಿ ಮತ್ತೂಮ್ಮೆ ಪರಿಶೀಲಿಸಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಒಂದೇ ಫೋಟೋ ಎರಡು ಬಾರಿ ನೋಂದಣಿ ಆಗಿದ್ದರೆ, ನಕಲಿ ಹೆಸರು ನಮೂ ದಾಗಿದ್ದರೆ, ಮರಣ ಹೊಂದಿದ ಪ್ರಕರಣಗಳು, ಸ್ಥಳಾಂತರ ಮುಂತಾದ ಕಾರಣಗಳಿಗಾಗಿ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಇದಕ್ಕೆ ತನ್ನದೇ ಆದ ಪ್ರಕ್ರಿಯೆ ಹಾಗೂ ಪ್ರತ್ಯೇಕ ಫಾರಂಗಳನ್ನು ತುಂಬಬೇಕಾಗುತ್ತದೆ. ಒಂದೊಮ್ಮೆ ಈ ಪ್ರಕ್ರಿಯೆಯಲ್ಲಿ ಲೋಪಗಳಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ.

ಶೇ.4ಕ್ಕಿಂತ ಅಧಿಕ ಮತದಾರರ ಹೆಸರನ್ನು ತೆಗೆದುಹಾಕಲಾಗಿದ್ದ ಕ್ಷೇತ್ರಗಳ ಮತದಾರರ ಪಟ್ಟಿ ಮರುಪರಿ ಶೀಲನೆಗೆ ಆಯೋಗ ನಿರ್ದೇಶಿಸಿತ್ತು.

ಚುನಾವಣ ಆಯೋಗದ ನಿರ್ದೇಶನದಂತೆ ಶೇ.4ಕ್ಕಿಂತ ಅಧಿಕ ಹೆಸರುಗಳನ್ನು ತೆಗೆದುಹಾಕಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಮರು ಪರಿಶೀಲಿಸಲಾಗಿದ್ದು, ವರದಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಆಯೋಗಕ್ಕೆ ಕಳಿಸಿಕೊಡಲಾಗಿದೆ.
– ಎಸ್‌. ಯೋಗೇಶ್ವರ್‌,
ಜಂಟಿ ಮುಖ್ಯ ಚುನಾವಣಾಧಿಕಾರಿ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next