ಬೆಂಗಳೂರು: ವಿರಾಟ್ ಕೊಹ್ಲಿ ಬಳಿಕ ಆರ್ ಸಿಬಿ ತಂಡಕ್ಕೆ ನಾಯಕ ಯಾರಾಗ್ತಾರೆ ಎನ್ನುವುದು ಆರ್ ಸಿಬಿ ಅಭಿಮಾನಿಗಳಿಗೆ ಕಾಡುತ್ತಿದ್ದ ಕುತೂಹಲವಾಗಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಈ ಬಾರಿ ಆರ್ ಸಿಬಿ ತಂಡಕ್ಕೆ ಆಯ್ಕೆಯಾದ ದ.ಆಫ್ರಿಕಾದ ಮಾಜಿ ನಾಯಕ, ಸ್ಫೋಟಕ ಆಟಗಾರ ಪಾಫ್ ಡು ಪ್ಲೆಸೆಸ್ ನನ್ನು ಆರ್ ಸಿಬಿ ತನ್ನ ನೂತನ ಕ್ಯಾಪ್ಟನ್ ನ್ನಾಗಿ ಆಯ್ಕೆ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ಮಾಹಿತಿಯನ್ನು ಖಚಿತಪಡಿಸಿದೆ.
ಈ ಮೊದಲು ಗ್ಲೆನ್ ಮ್ಯಾಕ್ಸ್ ವೆಲ್ , ದಿನೇಶ್ ಕಾರ್ತಿಕ್ ಹೆಸರು ಕ್ಯಾಪ್ಟನ್ ಲಿಸ್ಟ್ ನಲ್ಲಿ ಕೇಳಿ ಬಂದಿತ್ತು. ಆದರೆ ಇಂದು ನಡೆದ ಆರ್ ಸಿಬಿಯ 12
th ಆರ್ಮಿ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ತಂಡದ ಹೊಸ ಕಪ್ತಾನನ ಹೆಸರನ್ನು ರಿವೀಲ್ ಮಾಡಲಾಗಿದೆ.
ಇನ್ನು ಇಷ್ಟು ವರ್ಷ ಆಟಗಾರನಾಗಿ ತಂಡದಲ್ಲಿದ್ದ ಎಬಿ ಡಿವಿಲಿಯರ್ಸ್, ಈ ಸಲಿ ಮೆಂಟರ್ ಆಗಿ ತಂಡದ ಜತೆಯಲ್ಲಿರಲಿದ್ದಾರೆ. ಚೆನ್ನೈ ತಂಡದಲ್ಲಿ ಬೆನ್ನುಲುಬು ಆಟಗಾರನಾಗಿ ಮಿಂಚಿದ ಅನುಭವಿ ಪಾಫ್ ಕಪ್ತಾನನಾಗಿ ಕಪ್ ಗೆಲ್ಲಲಿ ಎಂಬುದು ಆರ್ ಸಿಬಿ ಅಭಿಮಾನಿಗಳ ಆಶಯವಾಗಿದೆ.
ಮಾರ್ಚ್ 26 ರಿಂದ ಐಪಿಎಲ್ ಸೀಸನ್ 15 ಶುರುವಾಗಲಿದೆ. ಈ ಬಾರಿ ಅಹಮದಬಾದ್ ಹಾಗೂ ಗುಜರಾತ್ ಎರಡು ಹೊಸ ತಂಡಗಳೊಂದಿಗೆ ಒಟ್ಟು 10 ತಂಡಗಳು ಸೆಣಸಾಟ ನಡೆಸಲಿದೆ.