Advertisement

ಆರ್‌ಸಿಬಿಗೆ ಇನ್ನೇನೂ ಉಳಿದಿಲ್ಲ!

11:42 AM May 01, 2017 | |

ಮುಂಬಯಿ: ಹತ್ತನೇ ಐಪಿಎಲ್‌ನಲ್ಲಿ ಆರ್‌ಸಿಬಿ ಆಟ ಮುಗಿ ದಿದೆ. “ಬಹುತೇಕ’ ಅಲ್ಲ, ಸಂಪೂರ್ಣ ವಾಗಿಯೇ ಮುಗಿದಿದೆ. ಆದರೂ ರಾಯಲ್‌ ಚಾಲೆಂಜರ್ ಆಡುತ್ತದೆ….

Advertisement

ಆರ್‌ಸಿಬಿ ಪ್ಲೇ-ಆಫ್ ಪ್ರವೇಶಿಸ ಬೇಕಾದರೆ ಆ ತಂಡ ಇಷ್ಟು ಪಂದ್ಯ ಗಳನ್ನು ಸೋಲಬೇಕು, ಈ ತಂಡ ಇಷ್ಟು ಪಂದ್ಯಗಳಲ್ಲಿ ಲಾಗ ಹಾಕ ಬೇಕು, ಹಾಗೆಯೇ ಆರ್‌ಸಿಬಿ ಉಳಿ ದೆಲ್ಲ ಪಂದ್ಯಗಳನ್ನು ಭಾರೀ ಅಂತರ ದಿಂದ ಗೆಲ್ಲಬೇಕು… ಹೀಗೆ ಏನೇನೋ ಲೆಕ್ಕಾಚಾರಗಳು. ಆದರೆ ಇದೆಲ್ಲ ಸಾಕಾರ 
ಗೊಳ್ಳುವುದು, ಕೊಹ್ಲಿ ಪಡೆ ಮುನ್ನಡೆ ಯುವುದು ಸಾಧ್ಯವೇ ಇಲ್ಲದ ಮಾತು. ಅಲ್ಲದೇ ಬೇರೆ ತಂಡಗಳ ಸೋಲನ್ನು ಹಾರೈಸಿ ತಾನು ಮೇಲೇರುವುದರಲ್ಲಿ ಅರ್ಥವೇ ಇಲ್ಲ. ಆದರೂ ಆರ್‌ಸಿಬಿ ಆಡುತ್ತದೆ; ಲೀಗ್‌ ಔಪಚಾರಿಕತೆಯನ್ನು ಪೂರೈಸುವ ಸಲುವಾಗಿ ಉಳಿದ 4 ಪಂದ್ಯಗಳನ್ನು ಆಡಿಯೇ ಆಡುತ್ತದೆ. ಆರ್‌ಸಿಬಿ ಫ‌ಲಿತಾಂಶ ಉಳಿದ ತಂಡಗಳಿಗೆ ಮಹತ್ವದ್ದಾಗಬೇಕಿದೆ. 

10 ಪಂದ್ಯಗಳಲ್ಲಿ ಏಳನ್ನು ಸೋತಿ ರುವ ರಾಯಲ್‌ ಚಾಲೆಂಜರ್ ಬೆಂಗ ಳೂರು ಸೋಮವಾರದ ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಪ್ರಬಲ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸ ಲಿದೆ. ಪಂದ್ಯದ ತಾಣ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’. ತವರಿನ ಈ ಪಂದ್ಯ ರೋಹಿತ್‌ ಶರ್ಮ ಬಳಗದ ಪಾಲಿಗೆ ಮಹತ್ವದ್ದಾಗಿದೆ. 

ಮುಂಬೈ 9 ಪಂದ್ಯಗಳಿಂದ 14 ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿ ನೆಲೆಸಿದೆ. ಇನ್ನೊಂದೆಡೆ ಕೆಕೆಆರ್‌ ಕೂಡ ಇಷ್ಟೇ ಅಂಕ ಗಳಿಸಿದೆ. ರನ್‌ರೇಟ್‌ನಲ್ಲಿ ಮುಂದಿರುವ ಕಾರಣ ಗಂಭೀರ್‌ ಪಡೆ ಅಗ್ರಸ್ಥಾನ ಅಲಂಕರಿಸಿದೆ. ಬೆಂಗಳೂರನ್ನು ಮರು ಪಂದ್ಯದಲ್ಲೂ ಸೋಲಿಸಿದರೆ ಮುಂಬೈ ಮೊದಲ ಸ್ಥಾನಕ್ಕೆ ನೆಗೆಯಲಿದೆ. ಅಷ್ಟೇ ಅಲ್ಲ, ಅದರ ಪ್ಲೇ-ಆಫ್ ಪ್ರವೇಶ ಅಧಿಕೃತಗೊಳ್ಳಲಿದೆ. 10ನೇ ಐಪಿಎಲ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯೂ ರೋಹಿತ್‌ ಬಳಗದ್ದಾಗಲಿದೆ. ಈ ನಿಟ್ಟಿನಲ್ಲಿ ಮುಂಬೈ ಪ್ರಯತ್ನ ಸಾಗುವುದರಲ್ಲಿ ಅನುಮಾನವಿಲ್ಲ.

ಇತ್ತಂಡಗಳ ನಡುವೆ ಮೊದಲ ಮುಖಾಮುಖೀ ಏರ್ಪಟ್ಟದ್ದು ಎ. 14ರಂದು. ಅಂದು ಆರ್‌ಸಿಬಿಯ ತವ ರಾದ ಬೆಂಗಳೂರಿನಲ್ಲೇ ಮುಂಬೈ ಪಡೆ 4 ವಿಕೆಟ್‌ಗಳ ಜಯ ಸಾಧಿಸಿ ಮೆರೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಗಳಿಸಿದ್ದು 5ಕ್ಕೆ 142 ರನ್‌ ಮಾತ್ರ. 62 ರನ್‌ ಮಾಡಿದ ಕೊಹ್ಲಿ ಅವರದೇ ಗರಿಷ್ಠ ಗಳಿಕೆ. ಮುಂಬೈಗೆ ಆರ್‌ಸಿಬಿ ಬೌಲರ್‌ಗಳು ಬಲವಾದ ತಿರುಗೇಟು ನೀಡಿದ್ದರು. 7 ರನ್ನಿಗೆ 4 ವಿಕೆಟ್‌, 33 ರನ್ನಿಗೆ 5 ವಿಕೆಟ್‌ ಉದುರಿಸಿಕೊಂಡು ಚಿಂತಾಜನಕ ಸ್ಥಿತಿ ತಲುಪಿತ್ತು ಮುಂಬೈ. ಆದರೂ ಈ ಪಂದ್ಯವನ್ನು ಕೈವಶಗೊಳಿಸಲು ಆರ್‌ಸಿಬಿ ಯಿಂದ ಸಾಧ್ಯವಾಗಿರಲಿಲ್ಲ. ಪೊಲಾರ್ಡ್‌ – ಕೃಣಾಲ್‌ ಪಾಂಡ್ಯ ಸೇರಿ ಕೊಂಡು ಮುಂಬೈಗೆ ಅಮೋಘ ಜಯ ತಂದಿತ್ತರು.
 
ಅತ್ಯಂತ ಸಂಘಟಿತ ತಂಡವಾಗಿ ಮಾರ್ಪಟ್ಟಿರುವ ಮುಂಬೈ ಸಾಲು ಸಾಲು ಸ್ಟಾರ್‌ ಆಟಗಾರರನ್ನು ಹೊಂದಿದೆ. ಪರಿಸ್ಥಿತಿ ಹೇಗೆಯೇ ಇರಲಿ, ಯಾರಾದರಿಬ್ಬರು ಸೇರಿಕೊಂಡು ತಂಡವನ್ನು ಗೆಲ್ಲಿಸಿಕೊಡುತ್ತಲೇ ಬಂದಿದ್ದಾರೆ. ಪಾರ್ಥಿವ್‌, ಬಟ್ಲರ್‌, ರಾಣ, ಪೊಲಾರ್ಡ್‌, ಪಾಂಡ್ಯಾಸ್‌, ಬುಮ್ರಾ, ಮಾಲಿಂಗ ಅವರೆಲ್ಲ ತಂಡದ ನೆರವಿಗೆ ನಿಂತಿದ್ದಾರೆ. ಪುಣೆ ವಿರುದ್ಧ ವಾಂಖೇಡೆ ಯಲ್ಲಿ ಎಡವಿದ್ದೊಂದೇ ಮುಂಬೈಗೆ ಎದುರಾದ ಅನಿರೀಕ್ಷಿತ ಫ‌ಲಿತಾಂಶ.

Advertisement

ಆರ್‌ಸಿಬಿ ಮೇಲೆ ನಂಬಿಕೆ ಇಲ್ಲ
ಆರ್‌ಸಿಬಿ ವಿಶ್ವ ದರ್ಜೆಯ ಬ್ಯಾಟ್ಸ್‌ ಮನ್‌ಗಳನ್ನು ಹೊಂದಿರುವ ತಂಡ. ಆದರೆ ಇಂಥ ಬ್ಯಾಟ್ಸ್‌ಮನ್‌ಗಳೂ ಎಷ್ಟು ಕೆಟ್ಟದಾಗಿ ಆಡುತ್ತಾರೆ ಎಂಬುದನ್ನು 10ನೇ ಐಪಿಎಲ್‌ನಲ್ಲಿ ಆರ್‌ಸಿಬಿ ತೋರಿಸಿ ಕೊಟ್ಟಿದೆ. ಹೀಗಾಗಿ ಕೊಹ್ಲಿ ಬಳಗದ ಮೇಲೆ ಯಾವ ನಂಬಿಕೆಯೂ ಉಳಿದಿಲ್ಲ. ಮುಂಬೈ ಯನ್ನು ಮಣಿಸಿದರೆ ಘಾಸಿ ಗೊಂಡ ಪ್ರತಿಷ್ಠೆಗೆ ಒಂದಿಷ್ಟು ಪ್ಯಾಚ್‌-ಅಪ್‌ ಮಾಡಿಕೊಳ್ಳಬಹುದು, ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next