Advertisement

ಪಿಎಂ ಮೋದಿಗೆ ಧನ್ಯವಾದ ಅರ್ಪಿಸಿದ ಆರ್‌ಸಿಬಿಯ ಮೈಕ್ ಹೆಸ್ಸನ್‌

10:13 AM Apr 29, 2020 | keerthan |

ಮುಂಬೈ: ಕೋವಿಡ್-19 ವೈರಸ್‌ ದಿಗ್ಬಂಧನ ನಡುವೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕೂಟದ ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡದ ಕ್ರಿಕೆಟ್‌ ನಿರ್ವಹಣಾ ನಿರ್ದೇಶಕ ಮೈಕ್‌ ಹೆಸ್ಸನ್‌ ಭಾರತದಿಂದ ನ್ಯೂಜಿಲೆಂಡ್‌ಗೆ ಹಾರಿದ್ದಾರೆ.

Advertisement

ಸಂಕಷ್ಟದಲ್ಲಿ ನೆರವಾದ ಪ್ರಧಾನಿ ನರೇಂದ್ರ ಮೋದಿ, ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡನ್, ರಾಯಭಾರಿ ಕಚೇರಿಗೆಗಳಿಗೆ ಮೈಕ್  ಹೆಸ್ಸನ್‌ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ನ್ಯೂಜಿಲ್ಯಾಂಡ್ ಮಾಜಿ ಕೋಚ್ ಆಗಿರುವ ಮೈಕ್ ಹೆಸ್ಸನ್‌,  ಐಪಿಎಲ್‌ಗಾಗಿ ಮಾ.5ರಂದು ಭಾರತಕ್ಕೆ ಆಗಮಿಸಿದ್ದರು. ಈ ಬೆನ್ನಲ್ಲೆ ಕೋವಿಡ್-19 ವ್ಯಾಪಿಸಿದ್ದರಿಂದ ವಿದೇಶಿ ವಿಮಾನ ಸೇವೆ ಹಠಾತ್‌ ರದ್ದುಗೊಂಡಿತ್ತು. ಇದರಿಂದಾಗಿ ಹೆಸ್ಸನ್‌ ಬೆಂಗಳೂರಿನಲ್ಲೇ ಬಾಕಿಯಾಗಿದ್ದರು.

ಭಾರತದಂತೆಯೇ ನ್ಯೂಜಿಲ್ಯಾಂಡ್ ನಲ್ಲೂ ಲಾಕ್ ಡೌನ್ ಹೇರಲಾಗಿದೆ. ಸದ್ಯ ಭಾರತದಲ್ಲಿ ಲಾಕ್ ಡೌನ್ ಮುಂದುವರೆದರೆ, ನ್ಯೂಜಿಲ್ಯಾಂಡ್ ಶುಕ್ರವಾರದಿಂದ ನಿಧಾನವಾಗಿ ತೆರವು ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next