ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಇಂದಿನ ಪಂದ್ಯದ ಗೆಲುವು ಮುಖ್ಯ. ಆದರೆ ಎದುರಾಗಿರುವುದು ಅಗ್ರ ಶ್ರೇಯಾಂಕದ ಗುಜರಾತ್ ಟೈಟಾನ್ಸ್ ತಂಡ. ಆದರೆ ಈ ಪಂದ್ಯಕ್ಕೂ ಮೊದಲೇ ಬೆಂಗಳೂರು ಫ್ರಾಂಚೈಸಿಗೆ ಶಾಕ್ ಎದುರಾಗಿದೆ.
ತಂಡದ ಪ್ರಮುಖ ಬೌಲರ್ ಜೋಶ್ ಹೇಜಲ್ ವುಡ್ ಅವರು ಮತ್ತೆ ಗಾಯಗೊಂಡಿದ್ದಾರೆ. ಆರಂಭದಲ್ಲೇ ಗಾಯಗೊಂಡಿದ್ದ ಹೇಜಲ್ ವುಡ್ ಆರ್ ಸಿಬಿಯ ಆರಂಭಿಕ ಎಂಟು ಪಂದ್ಯಗಳಲ್ಲಿ ಆಡಿರಲಿಲ್ಲ. ನಂತರ ಮೂರು ಪಂದ್ಯಗಳಲ್ಲಿ ಆಸೀಸ್ ವೇಗಿ ಆಡಿದ್ದರು. ಆದರೆ ಅವರ ಗಾಯ ಮರುಕಳಿಸಿದ್ದು, ಕೂಟದಿಂದಲೇ ಹೊರಬಿದ್ದಿದ್ದಾರೆ.
ಈಗಾಗಲೇ ಆರ್ ಸಿಬಿಯ ಡೇವಿಡ್ ವಿಲ್ಲಿ ಮತ್ತು ರೀಸ್ ಟೋಪ್ಲಿ ಗಾಯದ ಕಾರಣದಿಂದ ತವರಿಗೆ ಮರಳಿದ್ದಾರೆ. ಜೋಶ್ ಹೇಜಲ್ ವುಡ್ ಮತ್ತೊಂದು ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಪ್ರಧಾನಿ Narendra Modi ಅಟೋಗ್ರಾಫ್ ಕೇಳಿದ ಯುಎಸ್ ಅಧ್ಯಕ್ಷ Joe Biden
Related Articles
ಐಪಿಎಲ್ ನಿಂದ ಹೊರಬಿದ್ದ ಹೇಜಲ್ ವುಡ್ ತವರಿಗೆ ಮರಳಿದ್ದಾರೆ. ಜೂನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗಿದೆ.