Advertisement

ಆರ್‌ಸಿಬಿಗೆ ಮಹಿಳಾ ಮಸಾಜ್‌ ಥೆರಪಿಸ್ಟ್‌

09:43 PM Oct 17, 2019 | Sriram |

ಬೆಂಗಳೂರು: ಐಪಿಎಲ್‌ನ ಪ್ರಮುಖ ತಂಡವಾಗಿರುವ ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿಗೆ ನವನೀತಾ ಗೌತಮ್‌ ಸ್ಪೋರ್ಟ್ಸ್ ಮಸಾಜ್‌ ಥೆರಪಿಸ್ಟ್‌ ಆಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ತಂಡವೊಂದು ಐಪಿಎಲ್‌ ಇತಿಹಾಸದಲ್ಲಿ ಮಹಿಳೆಯೊಬ್ಬರನ್ನು ಸಹಾಯಕ ಸಿಬಂದಿಯಾಗಿ ನೇಮಿಸಿರುವುದು!

Advertisement

ಈ ಬಗ್ಗೆ ಮಾತನಾಡಿದ ತಂಡದ ಮುಖ್ಯಸ್ಥ ಸಂಜೀವ್‌ ಚೂರಿವಾಲ , “ಇಂಥದೊಂದು ನಿರ್ಧಾರ ತೆಗೆದುಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ನವನೀತಾರಂತಹ ಪ್ರತಿಭಾವಂತೆ ನಮ್ಮ ತಂಡದ ಸಹಾಯಕ ಸಿಬಂದಿಯಾಗಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ. ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ಇದ್ದಾಳೆ. ಆಕೆಗೆ ಎಲ್ಲರಂತೆ ಸಮಾನ ಅವಕಾಶ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಾವಿಟ್ಟಿರುವ ಹೆಜ್ಜೆ ಎಲ್ಲರಿಗೂ ಮಾದರಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next