Advertisement

ಆನ್‌ಲೈನ್‌ ಸಾಲ ವಿತರಣ ವೇದಿಕೆಗಳ ಬಗ್ಗೆ ಆರ್‌ಬಿಐ ಎಚ್ಚರಿಕೆ

11:37 PM Dec 23, 2020 | sudhir |

ಹೊಸದಿಲ್ಲಿ: ಅನಧಿಕೃತ ಸಾಲ ವಿತರಣೆ ವೇದಿಕೆಗಳು ಮತ್ತು ಮೊಬೈಲ್‌ ಆ್ಯಪ್‌ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ದೇಶದ ಜನ ಸಾಮಾನ್ಯರಿಗೆ ಸಲಹೆ ನೀಡಿದೆ.

Advertisement

ಶೀಘ್ರವಾಗಿ, ಅಡೆತಡೆ ಮುಕ್ತ ಸಾಲ ಒದಗಿಸುವ ಆಮಿಷ ಒಡ್ಡಿ ವಂಚಿಸುತ್ತಿರುವ ಆನ್‌ಲೈನ್‌ ಸಾಲ ವಿತರಣ ವೇದಿಕೆಗಳು ಮತ್ತು ಆ್ಯಪ್‌ಗಳ ಬಗ್ಗೆ ತನಗೆ ದೂರುಗಳು ಬಂದಿರುವುದಾಗಿ ಆರ್‌ಬಿಐ ಬುಧವಾರ ಅಧಿಕೃತ ಪ್ರಕಟನೆಯಲ್ಲಿ ಹೇಳಿದೆ.

ಇಂತಹ ಆಮಿಷಗಳು ಮತ್ತು ಸಂಭಾವ್ಯ ವಂಚನೆಗಳ ಬಗ್ಗೆ ಜನರು ಎಚ್ಚರಿಕೆ ವಹಿಸ ಬೇಕು. ಈ ಸಂಬಂಧ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಅಥವಾ ಈ ವಿಚಾರದಲ್ಲಿ ಮುಂದುವರಿಯುವ ಮುನ್ನ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಆರ್‌ಬಿಐ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next