Advertisement

RBI; ಬಡ್ಡಿ ದರದಲ್ಲಿ ಯಥಾಸ್ಥಿತಿ: ಜಿಡಿಪಿ ಅಂದಾಜು ಹೆಚ್ಚಳ

12:41 AM Jun 08, 2024 | |

ಹೊಸದಿಲ್ಲಿ: ಸತತ 8ನೇ ಬಾರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರಲು ನಿರ್ಧರಿಸಲಾಗಿದೆ. ಹೀಗಾಗಿ ದರ ಶೇ.6.50ರಲ್ಲೇ ಮುಂದುವರಿದಿದೆ.

Advertisement

ಇದೇ ವೇಳೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಆರ್‌ಬಿಐ ಶೇ.7.2 ಎಂದು ಅಂದಾಜಿಸಿದೆ. ಈ ಹಿಂದೆ ಅದನ್ನು ಶೇ.7 ಎಂದು ಅಂದಾಜಿಸಲಾಗಿತ್ತು. ಹಣದುಬ್ಬರದ ಅಂದಾಜನ್ನು ಶೇ.4.5 ರಲ್ಲೇ ಮುಂದುವರಿಸಲಾಗಿದೆ.

ಠೇವಣಿ ಮಿತಿ ಹೆಚ್ಚಳ: ದೊಡ್ಡ ಮಟ್ಟದ ನಿಗದಿತ ಠೇವಣಿಯ ಮಿತಿಯನ್ನು ಈಗಿರುವ 2 ಕೋಟಿ ರೂ.ಗಳಿಂದ 3 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ.

ವಂಚನೆ ತಡೆಗೆ ಪ್ಲಾಟ್‌ಫಾರಂ
ಆನ್‌ಲೈನ್‌ ವಂಚನೆ ತಡೆಯುವ ನಿಟ್ಟಿನಲ್ಲಿ ಹೊಸ “ಡಿಜಿಟಲ್‌ ಪಾವತಿ ಗುಪ್ತಚರ ವೇದಿಕೆ’ ರೂಪಿಸಲು ಆರ್‌ಬಿಐ ಚಿಂತನೆ ನಡೆಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇದು ಹೊಂದಿರಲಿದ್ದು, ಅದರ ಮೂಲಕ ಆನ್‌ಲೈನ್‌ ವಂಚನೆ ತಡೆಯಲಾಗುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next