ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 1 ರಂದು ತನ್ನ 19 ಕಚೇರಿಗಳಲ್ಲಿ 2,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ.
ಕೇಂದ್ರ ಬ್ಯಾಂಕ್ ಪ್ರಕಟಣೆಯ ಪ್ರಕಾರ ಏಪ್ರಿಲ್ 2 ರಂದು ಸೇವೆ ಪುನರಾರಂಭವಾಗಲಿದೆ.
“ಖಾತೆಗಳ ವಾರ್ಷಿಕ ಮುಚ್ಚುವಿಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ 19 ಕಛೇರಿಗಳಲ್ಲಿ ಏಪ್ರಿಲ್ 01 ಸೋಮವಾರದಂದು ರೂ 2,000 ನೋಟುಗಳ ವಿನಿಮಯ/ಠೇವಣಿ ಸೌಲಭ್ಯ ಲಭ್ಯವಿರುವುದಿಲ್ಲ. ಈ ಸೌಲಭ್ಯವು ಮಂಗಳವಾರ ಪುನರಾರಂಭಗೊಳ್ಳುತ್ತದೆ.” ಎಂದು ಆರ್ ಬಿಐ ಹೇಳಿದೆ.
ಕಳೆದ ವರ್ಷ ಮೇ 19 ರಿಂದ ಅಹಮದಾಬಾದ್, ಬೆಂಗಳೂರು, ಮುಂಬೈ ಮತ್ತು ಇತರ ನಗರಗಳಲ್ಲಿರುವ 19 ಆರ್‌ಬಿಐ ಕಚೇರಿಗಳಲ್ಲಿ ಜನರು ರೂ 2,000 ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೆ ಖಾತೆಗಳ ವಾರ್ಷಿಕ ಮುಚ್ಚುವಿಕೆಯಿಂದಾಗಿ, ಈ ಸೇವೆಯು ಏಪ್ರಿಲ್ 1 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ ಮತ್ತು ಮರುದಿನ ಪುನರಾರಂಭಗೊಳ್ಳುತ್ತದೆ.
ಹಿಂದಿನ ವರ್ಷದ ಅಕ್ಟೋಬರ್‌ನಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ 2,000 ರೂಪಾಯಿ ನೋಟುಗಳನ್ನು ಜಮಾ ಮಾಡಲು ಆರ್‌ಬಿಐ ಅವಕಾಶ ನೀಡುತ್ತಿದೆ.
ಮಾರ್ಚ್ 1, 2024 ರ ಹೊತ್ತಿಗೆ ಚಲಾವಣೆಯಲ್ಲಿರುವ ರೂ 2,000 ನೋಟುಗಳಲ್ಲಿ ಸುಮಾರು 97.62% ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ.