Advertisement

ಬಡ್ಡಿ ದರ, ಜಿಡಿಪಿ ಅಂದಾಜು ಯಥಾವತ್‌ ಉಳಿಸಿಕೊಂಡ ಆರ್‌ಬಿಐ

03:17 PM Dec 06, 2017 | udayavani editorial |

ಹೊಸದಿಲ್ಲಿ : ಬಡ್ಡಿ ದರ ಕಡಿತಕ್ಕೆ ಪೂರಕವಾದ ಹಣದುಬ್ಬರ ಸನ್ನಿವೇಶ ಇದ್ದ ಹೊರತಾಗಿಯೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ತನ್ನ ಬಡ್ಡಿದರಗಳನ್ನು ಯಥಾವತ್‌ ಉಳಿಸಿಕೊಂಡಿದೆ.

Advertisement

ನಗದು ಹೊಂದಾಣಿಕೆ ಸೌಕರ್ಯ (ಎಲ್‌ಎಎಫ್) ಅಡಿ ಆರ್‌ಬಿಐ ತನ್ನ ಪಾಲಿಸಿ ರಿಪೋ ರೇಟನ್ನು ಶೇ.6.0 ರಲ್ಲೇ ಯಥಾವಾತ್‌ ಉಳಿಸಿಕೊಂಡಿದೆ. ಪರಿಣಾಮವಾಗಿ ಎಲ್‌ಎಎಫ್ ರಿವರ್ಸ್‌ ರಿಪೋ ರೇಟನ್ನು  ಕೂಡ ಆರ್‌ಬಿಐ ಶೇ.5.75ರಲ್ಲೇ ಉಳಿಸಿಕೊಂಡಿದೆ. ಇದೇ ರೀತಿ ಮಾರ್ಜಿನಲ್‌ ಸ್ಟಾಂಡಿಂಗ್‌ ಫೆಸಿಲಿಟಿ (ಎಂಎಸ್‌ಎಫ್) ರೇಟ್‌ ಮತ್ತು ಬ್ಯಾಂಕ್‌ ರೇಟ್‌ ಕೂಡ ಶೇ.6.25ರಲ್ಲೇ ಉಳಿದುಕೊಂಡಿದೆ. 

ಇದೇ ವೇಳೆ ಆರ್‌ಬಿಐ ಹಾಲಿ ಹಣಕಾಸು ವರ್ಷದ ಮೂರನೇ ಮತ್ತು ನಾಲ್ಕನೇ ತ್ತೈಮಾಸಿಕದಲ್ಲಿ ಹಣದುಬ್ಬರವನ್ನು ಶೇ.4.3ರಿಂದ ಶೇ.4.7ರ ಪ್ರಮಾಣದಲ್ಲಿ ಅಂದಾಜಿಸಿದೆ. ಹಾಗೆಯೇ ಆರ್ಥಿಕ ಪ್ರಗತಿಯ ಅಂದಾಜನ್ನು ಶೇ.6.7ರಲ್ಲೇ ಉಳಿಸಿಕೊಂಡಿದೆ. 

ಹಣದುಬ್ಬರ ಇದೇ ರೀತಿ ಮುಂದೆಯೂ ಕೆಳಮಟ್ಟದಲ್ಲಿ ಉಳಿಯಲಾರದೆಂಬ ಕಾರಣಕ್ಕೆ ನಾವು ಬಡ್ಡಿ ದರ ಕಡಿತ ಮಾಡಿಲ್ಲ ಎಂದು ಆರ್‌ಬಿಐ ಗವರ್ನರ್‌  ಊರ್ಜಿತ್‌ ಪಟೇಲ್‌ ಹೇಳಿದರು. 

ಆರ್‌ಬಿಐ ಈ ವರ್ಷ ಆಗಸ್ಟ್‌ನಲ್ಲಿ  ತನ್ನ ಬೆಂಚ್‌ಮಾರ್ಕ್‌  ಸಾಲ ದರವನ್ನು  ಶೇ.0.25ರಷ್ಟು ಇಳಿಸಿ ಆರು ವರ್ಷಗಳ ಕನಿಷ್ಠ ಮಟ್ಟವಾಗಿ ಶೇ.6ಕ್ಕೆ ನಿಗದಿಸಿತ್ತು. 

Advertisement

ಆರ್‌ಬಿಐ ಇಂದು ತನ್ನ ಬಡ್ಡಿದರಗಳನ್ನು ಯಥಾವತ್‌ ಉಳಿಸಿಕೊಂಡ ಪರಿಣಾಮವಾಗಿ ಗೃಹ ಹಾಗೂ ಇನ್ನಿತರ ಬಗೆಯ ಸಾಲ ಪಡೆದ ಗ್ರಾಹಕರ ಇಎಂಐ ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಾಗಾಗಿ ಈ ವರ್ಗಕ್ಕೆ ಸಹಜವಾಗಿಯೇ ನಿರಾಶೆ ಉಂಟಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next