Advertisement

ಆರ್‌ಬಿಐ ಅಂಬೇಡ್ಕರ್‌ ಚಿಂತನೆಗಳ ಫಲ

04:45 PM May 22, 2017 | Team Udayavani |

ಕಲಬುರಗಿ: ಡಾ| ಬಾಬಾಸಾಹೇಬ ಅಂಬೇಡ್ಕರ್‌ ಅವರ ಚಿಂತನೆಗಳ ಫಲವಾಗಿಯೇ ದೇಶಕ್ಕೆ ಮಾದರಿಯಾಗಿರುವ ಆರ್‌ಬಿಐ ಸೇರಿದಂತೆ ಬ್ಯಾಂಕಿಂಗ್‌ ವಲಯ ಸಾಕಾರಗೊಂಡಿದೆ ಎಂದು ಖ್ಯಾತ ವಿಚಾರವಾದಿ ಡಾ| ಚಂದ್ರಶೇಖರ ಕಟ್ಟಿಮನಿ ಅಭಿಪ್ರಾಯಪಟ್ಟರು. 

Advertisement

ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ರವಿವಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಘ ಹಮ್ಮಿಕೊಂಡಿದ್ದ ಕಲಬುರಗಿ ಮತ್ತು ಬೀದರ ವಲಯ ಸಮ್ಮೇಳನದಲ್ಲಿ  ಡಾ| ಅಂಬೇಡ್ಕರ್‌ ಚಳವಳಿಗಳ ಕುರಿತು ಅವರು ಮಾತನಾಡಿದರು. 

ಬ್ಯಾಂಕಿಂಗ್‌ ಕ್ಷೇತ್ರ ಈಗ ತುಂಬಾ ಎತ್ತರದಲ್ಲಿದೆ. ಅದರ ಉನ್ನತಿಗಾಗಿ ಡಾ| ಅಂಬೇಡ್ಕರ್‌ ಅವರು ಕಾರಣರು. ಸರಕಾರಿ ನೌಕರರಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆ, ಭವಿಷ್ಯನಿಧಿ ಮುಂತಾದ ಸೌಲಭ್ಯಗಳು ಹಾಗೂ ಮಹಿಳಾ ನೌಕರರಿಗೂ ಹೆರಿಗೆ ರಜೆ ಸೇರಿದಂತೆ ಮುಂತಾದ ಸೌಕರ್ಯ ಒದಗಿಸುವುದನ್ನು ಸಂವಿಧಾನದಲ್ಲಿ ಬರೆಯುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. 

ಡಾ| ಅಂಬೇಡ್ಕರ್‌ ಕೊಟ್ಟ ಸವಲತ್ತುಗಳನ್ನು ಸರ್ಕಾರಿ ನೌಕರರು ಸದ್ಬಳಕೆ ಮಾಡಿಕೊಳ್ಳಬೇಕು. ಒಂದು ವೇಳೆ ಅಂಬೇಡ್ಕರ್‌ ಅವರು ಜನಿಸದೇ ಇದ್ದರೆ ಕಾರ್ಮಿಕರು ಬಂಡವಾಳಶಾಹಿಗಳ ಕೈಯಲ್ಲಿ ಗುಲಾಮರಾಗಿ ಮುಂದುವರಿಯಬೇಕಾಗಿತ್ತು ಎಂದು ಹೇಳಿದರು. 

ಡಾ| ಅಂಬೇಡ್ಕರ್‌ ಅವರು ಕೇವಲ ಒಂದು ಜಾತಿಗೆ ಸೀಮಿತವಲ್ಲ. ಅವರು ಎಲ್ಲರ ಸ್ವತ್ತು. ಅಂಬೇಡ್ಕರ್‌ ಅವರನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿ ಹಾಕಬೇಡಿ ಎಂದು ಸಲಹೆ ನೀಡಿದರು. ಸಂಘದ ರಾಜ್ಯಾಧ್ಯಕ್ಷ ಡಿ. ದೇವರಾಜ ಅಧ್ಯಕ್ಷತೆ ವಹಿಸಿದ್ದರು.

Advertisement

ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದ್ರಾಬಾದ್‌ ಪ್ರಾದೇಶಿಕ ವ್ಯವಸ್ಥಾಪಕ ಶಂಕರ ಪ್ರಸಾದ, ಸಹಾಯಕ ವ್ಯವಸ್ಥಾಪಕ ಪ್ರಶಾಂತಕುಮಾರ, ಗೋವಿಂದರಾಜ, ಡಾ| ಸುರೇಶ ರಾಠೊಡ, ಡಾ| ಜಾಗೃತಿ ದೇಶಮಾನೆ, ಸಂಘದ ಸಂಘಟನಾ ಕಾರ್ಯದರ್ಶಿ ಬಿ. ಎಸ್‌. ಶೇರಖಾನೆ,  

-ಪ್ರವೀಣ ಎ. ಸಾಗರ, ರಮೇಶ ಸಿಂಧೆ, ಪದ್ಮಾಜಿ, ರವಿಗೌಡ, ಪ್ರಕಾಶರಾವ, ಶ್ರೀಧರ ಪಾಲ್ಗೊಂಡಿದ್ದರು. ಸಿ.ಎಚ್‌. ಹವಾಲ್ದಾರ ಸ್ವಾಗತಿಸಿದರು. ಸಂಘದ ಕೇಂದ್ರ ಸಮಿತಿ ಸದಸ್ಯ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಲ್‌. ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next