Advertisement

ಎಟಿಎಂನಲ್ಲಿ ಇನ್ನು ವಾರಕ್ಕೆ 50 ಸಾವಿರ ವಿತ್‌ ಡ್ರಾ ಮಿತಿ

03:45 AM Feb 21, 2017 | Team Udayavani |

ನವದೆಹಲಿ: ಎಟಿಎಂಗಳಲ್ಲಿ ಇನ್ನು ಮುಂದೆ ವಾರದಲ್ಲಿ 50 ಸಾವಿರ ರೂ.ಗಳನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಇಲ್ಲಿಯ ತನಕ ಇದ್ದ 24 ಸಾವಿರ ರೂ. ವಿತ್‌ಡ್ರಾ ಮಿತಿಯನ್ನು ಆರ್‌ಬಿಐ ವಿಸ್ತರಿಸಿದೆ. 

Advertisement

ನೋಟು ಅಪನಗದೀಕರಣ ನಂತರ ಆರ್‌ಬಿಐ ವಿತ್‌ಡ್ರಾ ಮಿತಿಯನ್ನು 2,500 ರೂ.ನಿಂದ ವಿಸ್ತರಿಸುತ್ತಾ ಬಂದಿದ್ದು, ಮಾರ್ಚ್‌ 13ರ ನಂತರ 50 ಸಾವಿರ ರೂ. ನಿರ್ಬಂಧವನ್ನೂ ತೆಗೆದು ಹಾಕಲು ನಿರ್ಧರಿಸಲಾಗಿದೆ.

ಮತ್ತೆ ಆಪರೇಷನ್‌ ಕ್ಲೀನ್‌ ಮನಿ: ಒಂದೇ ವಿಳಾಸ ನೀಡಿ, ಬೇರೆ ಬೇರೆ ಖಾತೆ ತೆರೆದು, ಕಪ್ಪು ಹಣ ತುಂಬಿದ ಖಾತೆದಾರರಿಗೆ ಈಗ ಸಂಕಷ್ಟ ಎದುರಾಗಿದೆ. ಆದಾಯ ತೆರಿಗೆ ಇಲಾಖೆ ಈಗಾಗಲೇ ಆಪರೇಷನ್‌ ಕ್ಲೀನ್‌ ಮನಿ ಹೆಸರಿನಲ್ಲಿ, ನೋಟು ಅಮಾನ್ಯದ ವೇಳೆ 5 ಲಕ್ಷಕ್ಕಿಂತ ಅಧಿಕ ಹಣವನ್ನು ತುಂಬಿದ ಖಾತೆಗಳ ಮೇಲೆ ಹದ್ದಿನಕಣ್ಣು ಇಟ್ಟಿತ್ತು. ಈಗ ಒಂದೇ ವಿಳಾಸ, ಒಂದೇ ಪ್ಯಾನ್‌ ನಂಬರ್‌ ಹೊಂದಿದ ಬೇರೆ ಬೇರೆ ಖಾತೆಗಳನ್ನು ಖುದ್ದು ಪರಿಶೀಲಿಸಲು ಐಟಿ ಮುಂದಾಗಿದೆ. 500 ಹಾಗೂ 1000 ಮುಖಬೆಲೆಯ ನೋಟನ್ನು ನಿಷೇಧಿಸಿದ್ದಾಗ ಬ್ಯಾಂಕ್‌ ಖಾತೆಗಳಿಗೆ ಶೇ.86ರಷ್ಟು ಕಪ್ಪುಹಣ ತುಂಬಲಾಗಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಅಕ್ರಮವಾಗಿ ಹಣ ತುಂಬಿದ 18 ಲಕ್ಷ ಮಂದಿಗೆ ನೋಟಿಸ್‌ ಮೆಸೇಜುಗಳನ್ನು ರವಾನಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next