Advertisement

RBI: 25 ಮೂಲಾಂಶ ಏರಿಕೆಯೊಂದಿಗೆ ರಿಪೋ ದರ ಶೇ.6.50, ತಟಸ್ಥ ನಿಲುವು

03:28 PM Aug 01, 2018 | Team Udayavani |

ಹೊಸದಿಲ್ಲಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ಬುಧವಾರ ತನ್ನ ರಿಪೋ ದರವನ್ನು ಈಗಿನ ಶೇ.6.25ರಿಂದ ಶೇ.6.50 ಗೆ (25 ಮೂಲಾಂಶ) ಏರಿಸಿದೆ. ಇದೇ ರೀತಿ ರಿವರ್ಸ್‌ ರಿಪೋ ದರವನ್ನು ಈಗಿನ ಶೇ.6ರಿಂದ ಶೇ.6.25ಕ್ಕೆ (25 ಮೂಲಾಂಶ) ಏರಿಸಿದೆ. 

Advertisement

ಏರುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ನಡುವೆ ಸಂತುಲನೆಯನ್ನು ಸಾಧಿಸಿವುದೇ ಈ ಕ್ರಮದ ಉದ್ದೇಶವಾಗಿದೆ ಎಂದು ಆರ್‌ಬಿಐ ಹೇಳಿಕೊಂಡಿದೆ. 

ಇಂದು ಪ್ರಕಟಿಸಿದ ತನ್ನ ದ್ವೆ„ಮಾಸಿಕ ಹಣಕಾಸು ನೀತಿ ಪರಾಮಶೆಯಲ್ಲಿ ಆರ್‌ಬಿಐ ತಟಸ್ಥ ನೀತಿಯನ್ನು ಉಳಿಸಿಕೊಂಡಿದೆ. 

ಹಣಕಾಸು ನೀತಿ ಪರಾಮರ್ಶೆ ಸಮಿತಿಯ (ಎಂಪಿಸಿ) ಆರು ಸದಸ್ಯರ ಪೈಕಿ ಐವರು ರಿಪೋ ಮತ್ತು ರಿವರ್ಸ್‌ ರಿಪೋ ದರ ಏರಿಕೆ ಪ್ರಸ್ತಾವದ ಪರವಾಗಿ ಮತ ಹಾಕಿದರು.

ಆರ್‌ಬಿಐ ಈ ವರ್ಷದ ಎಪ್ರಿಲ್‌ – ಸೆಪ್ಟಂಬರ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ.7.5 – ಶೇ.7.6ರಲ್ಲಿ ಅಂದಾಜಿಸಿದೆ. 2019ರ ಹಣಕಾಸು ವರ್ಷದಲ್ಲಿನ ಜಿಡಿಪಿ ಪ್ರಗತಿಯ ಅಂದಾಜನ್ನು ಶೇ.7.4ರಲ್ಲೇ ಉಳಿಸಿಕೊಂಡಿದೆ. 

Advertisement

ಈ ವರ್ಷ ಜೂನ್‌ನಲ್ಲಿ ಆರ್‌ಬಿಐ ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ರಿಪೋ ದರ (ಸಾಲದ ಮೇಲಿನ ಬಡ್ಡಿ ದರ) ವನ್ನು 25 ಮೂಲಾಂಶ ಏರಿಸಿತ್ತು. ಅಂತೆಯೇ 2013ರ ಅಕ್ಟೋಬರ್‌ ಬಳಿಕದಲ್ಲಿ ಆರ್‌ಬಿಐ ಈ ದರವನ್ನು ತನ್ನ ನಿರಂತರ ಎರಡು ದ್ವೆ„ಮಾಸಿಕ ಪರಾಮರ್ಶೆಯಲ್ಲಿ ಏರಿಸಿರುವುದು ಗಮನಾರ್ಹವಾಗಿದೆ. 

ಭಾರತದ ವಾರ್ಷಿಕ ಗ್ರಾಹಕ ಹಣದುಬ್ಬರ ಈ ವರ್ಷ ಜೂನ್‌ನಲ್ಲಿ ಶೇ.5ಕ್ಕೆ ತಲುಪಿತ್ತು. ಆರ್‌ಬಿಐ ಮಧ್ಯಮಾವಧಿಗೆ ಮಾಡಿದ್ದ ಶೇ.4ರ ಅಂದಾಜನ್ನು ಮೀರಿ ನಿರಂತರ ಎಂಟನೇ ತಿಂಗಳಲ್ಲೂ ಹಣದುಬ್ಬರ ಏರಿದೆ. 

ಈ ವರ್ಷ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಶೇ.20ರಷ್ಟು ಏರಿದ್ದು ಕಳೆದ ಮೇ ತಿಂಗಳಲ್ಲಿ ಇದು ಬ್ಯಾರೆಲ್‌ಗೆ 80 ಡಾಲರ್‌ ಗಡಿ ದಾಟಿತ್ತು ಮತ್ತು ಆ ಮೂಲಕ ಅದು 2014ರ ಬಳಿಕದ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದರಿಂದಾಗಿ  ದೇಶದಲ್ಲಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಒಂದೇ ಸಮನೆ ಏರಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next