Advertisement

ನ.19ರಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ?

03:50 PM Nov 07, 2018 | udayavani editorial |

ಹೊಸದಿಲ್ಲಿ : ಸ್ವಾಯತ್ತೆ ಕುರಿತಂತೆ  ಸರಕಾರದೊಂದಿಗಿನ ಭಿನ್ನಾಭಿಪ್ರಾಯದ ಫ‌ಲವಾಗಿ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ಇದೇ ನ.19ರಂದು ನಡೆಯಲಿರುವ ಬ್ಯಾಂಕಿನ ಮುಂದಿನ ಬೋರ್ಡ್‌ ಮೀಟಿಂಗ್‌ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಗವರ್ನರ್‌ ಜತೆಗೆ ಸಂಪರ್ಕವಿರುವ ಮೂಲಗಳನ್ನು ಉಲ್ಲೇಖೀಸಿ, ಹಣಕಾಸು ನಿಯತಕಾಲಿಕ ಮನಿಲೈಫ್, ಇಂದು ಬುಧವಾರ ವರದಿ ಮಾಡಿದೆ.

Advertisement

ಆರ್‌ಬಿಐ ಗೆ ಎಷ್ಟು ಸ್ವಾಯತ್ತೆ ಇರಬೇಕು ಎಂಬ ವಿಷಯದಲ್ಲಿ ಸರಕಾರ ಮತ್ತು ಆರ್‌ಬಿಐ ನಡುವೆ ಈಚಿನ ದಿನಗಳಲ್ಲಿ ಜಟಾಪಟಿ ಏರ್ಪಟ್ಟಿರುವುದೇ ಊರ್ಜಿತ್‌ ರಾಜೀನಾಮೆಗೆ ಕಾರಣವಾಗಿದೆ. ಮೇಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಸಾಲ ನೀಡಿಕೆ ಮೇಲಿನ ನಿರ್ಬಂಧಗಳನ್ನು ಕಡಿಮೆ ಮಾಡಬೇಕು ಎಂದು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ; ಜತೆಗೆ ಆರ್‌ಬಿಐ ಬಳಿ ಇರುವ ಮೀಸಲು ನಿಧಿ ತನ್ನ ಬಳಕೆಗೆ ಸಿಗಬೇಕು ಎಂದು ಬಯಸುತ್ತಿದೆ. 

ಕಳೆದ ತಿಂಗಳಲ್ಲಿ ಆರ್‌ಬಿಐ ನ ಓರ್ವ ಡೆಪ್ಯುಟಿ ಗವರ್ನರ್‌ ತನ್ನ ಭಾಷಣದಲ್ಲಿ “ಆರ್‌ಬಿಐ ಸ್ವಾಯತ್ತೆಗೆ ಧಕ್ಕೆ ಉಂಟಾಗುವುದರಲ್ಲಿ ಸಂಭವನೀಯ ದುರಂತ ಇರುತ್ತದೆ’ ಎಂಬ ಎಚ್ಚರಿಕೆಯನ್ನು ನೀಡಿದ್ದರು. 

ಮನಿಲೈಫ್ ವರದಿಯ ಪ್ರಕಾರ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ನ.19ರಂದು ನಡೆಯಲಿರುವ ಆರ್‌ಬಿಐ ಬೋರ್ಡ್‌ ಮೀಟಿಂಗ್‌ ಸಂದರ್ಭದಲ್ಲೇ ರಾಜೀನಾಮೆ ಕೊಡುವ ಸಾಧ್ಯತೆ ಇದೆ; ಸ್ವಾಯತ್ತೆ ವಿಚಾರದಲ್ಲಿ ಅವರಿಗೆ ಸರಕಾರದೊಂದಿಗೆ ಜಟಾಪಟಿ ಸಾಕಾಗಿ ಹೋಗಿದೆ ಮತ್ತು ಇದರ ಒತ್ತಡವು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next