ನವದೆಹಲಿ: ಬ್ಯಾಂಕೇತರ ವಿತ್ತೀಯ ಸಂಸ್ಥೆಗಳು (ಎನ್‌ಬಿಎಫ್ ಸಿ) ಕೂಡ ಆಧಾರ್ ಆಧರಿತ ಇ- ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ವ್ಯವಸ್ಥೆ ಜಾರಿಗೆ ತರಲು ಒಪ್ಪಿಗೆ ನೀಡಿದೆ.
ಈ ನಿರ್ಧಾರದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ. ಆರ್‌ಬಿಐನ ಹೊಸ ನಿಯಮದಿಂದಾಗಿ ಪಾವತಿ ವ್ಯವಸ್ಥೆ ನೀಡುವವರು ಮತ್ತು ಪಾವತಿ ವ್ಯವಸ್ಥೆಯಲ್ಲಿ ಭಾಗವಹಿಸುವವರಿಗೆ ಆಧಾರ್ ದೃಢೀಕರಣ ಪರವಾನಗಿ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ವ್ಯವಸ್ಥೆ ಮೂಲಕ ಎನ್‌ಬಿಎಫ್ ಸಿಗಳು ಕೂಡ ಕೆವೈಸಿ ಬಳಕೆ ಮಾಡಲು ಸಂಸ್ಥೆ ಅಥವಾ ಅದರ ಉಪ ಕೇಂದ್ರವನ್ನು ಸ್ಥಾಪಿಸಲು ಅನುಮತಿ ಕೋರಲು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ:ಸೆ:20 ರಂದು ಕೆನರಾ ಬ್ಯಾಂಕಿನಲ್ಲಿ ಮಹಾ ಸಾಲಮೇಳ
ಆರ್‌ಬಿಐ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂಸ್ವೆ„ಪ್ ಸಂಸ್ಥೆಯ ಅಂಕಿತ್ ಭಟ್ನಾಗರ್, ಬ್ಯಾಂಕೇತರ ವಿತ್ತೀಯ ಸಂಸ್ಥೆಗಳಿಗೆ ಕೂಡ ಆಧಾರ್ ಆಧರಿಕ ಇ-ಕೆವೈಸಿ ವ್ಯವಸ್ಥೆ ಬಳಕೆ ಮಾಡಲು ಅನುಮತಿ ನೀಡಿದ್ದರಿಂದಲಾಗಿ ಗ್ರಾಹಕರು ಮತ್ತು ಸಂಸ್ಥೆಗಳ ನಡುವಿನ ನಂಬಿಕೆ ಮತ್ತಷ್ಟು ದೃಢವಾಗಲಿದೆ ಎಂದು ಹೇಳಿದ್ದಾರೆ.