Advertisement

RBI ಇಂಗ್ಲೆಂಡ್‌ನಿಂದ 100 ಟನ್‌ ಚಿನ್ನ ವಾಪಸ್‌

01:47 AM Jun 01, 2024 | Team Udayavani |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಸದ್ದಿಲ್ಲದೆ 100 ಟನ್‌ ಚಿನ್ನವನ್ನು ಬ್ಯಾಂಕ್‌ ಆಫ್ ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ಸ್ಥಳಾಂತರಿಸಿದೆ! ಸುರಕ್ಷೆಯ ಕಾರಣಕ್ಕೆ ಇಂಗ್ಲೆಂಡ್‌ ಬ್ಯಾಂಕ್‌ನಲ್ಲಿ ಇರಿಸಿದ್ದ ಚಿನ್ನದಲ್ಲಿ ಸ್ವಲ್ಪ ಪ್ರಮಾಣವನ್ನು ವಾಪಸ್‌ ತಂದಿದೆ. ಮುಂದಿನ ದಿನ ಗಳಲ್ಲಿ ಇನ್ನೂ ಇಷ್ಟು ಪ್ರಮಾಣದ ಚಿನ್ನವನ್ನು ಮರಳಿ ತರುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿವೆ. ವಿಶೇಷವೆಂದರೆ 1991ರ ಅನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತವು ತನ್ನ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು.

Advertisement

ವಿದೇಶದಲ್ಲಿಟ್ಟಿದ್ದ ಚಿನ್ನವನ್ನು ಮರಳಿ ದೇಶಕ್ಕೆ ತಂದಿರುವುದು ಬಹಳ ಮಹತ್ವ ಪಡೆದಿದೆ. ಪ್ರಸ್ತುತ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ ಒಟ್ಟು 822.10 ಟನ್‌ ಚಿನ್ನ ಸಂಗ್ರಹವಿದೆ. ಇದರಲ್ಲಿ 408.31 ಟನ್‌ ಚಿನ್ನವನ್ನು ದೇಶದಲ್ಲಿಯೇ ಇರಿಸಿಕೊಂಡಿದ್ದರೆ ಅರ್ಧಕ್ಕೂ ಹೆಚ್ಚು ಚಿನ್ನದ ದಾಸ್ತಾನು ಇಂಗ್ಲೆಂಡ್‌ ಮತ್ತು ಸ್ವಿಜರ್ಲೆಂಡ್‌ನ‌ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಮತ್ತಷ್ಟು
ಚಿನ್ನ ವಾಪಸ್‌?
ಮುಂದಿನ ತಿಂಗಳುಗಳಲ್ಲಿ ಆರ್‌ಬಿಐ ಇನ್ನಷ್ಟು ಚಿನ್ನವನ್ನು ದೇಶಕ್ಕೆ ಸ್ಥಳಾಂತರಿಸಲಿದೆ ಎನ್ನಲಾಗಿದೆ. ಚಿನ್ನವನ್ನು ವಿದೇಶದಲ್ಲಿ ಇರಿಸಲು ನೀಡಬೇಕಾದ ಬೃಹತ್‌ ಮೊತ್ತದ ಹಣವನ್ನು ಇದರಿಂದ ಉಳಿಸಬಹುದು ಎಂಬ ಕಾರಣದಿಂದ ಆರ್‌ಬಿಐ ಈ ಹೆಜ್ಜೆಯಿರಿಸಿದೆ ಎಂದು ವಿಶ್ಲೇಷಿಸಲಾಗಿದೆ. ವಿದೇಶಾಂಗ ವಿನಿಮಯದ ಭಾಗವಾಗಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಸಂಗ್ರಹವನ್ನು ಆರ್‌ಬಿಐ ಹೊಂದಿದೆ.

ಎಲ್ಲಿತ್ತು? ಎಷ್ಟಿತ್ತು?
-ಆರ್‌ಬಿಐ ಬಳಿ 822.10ಟನ್‌ ಚಿನ್ನ ಸಂಗ್ರಹವಿದೆ.
-408.31 ಟನ್‌ ಚಿನ್ನವನ್ನು ದೇಶದಲ್ಲೇ ಇರಿಸಿಕೊಳ್ಳಲಾಗಿದೆ.
-ಒಟ್ಟು ಸಂಗ್ರಹದ ಅರ್ಧಕ್ಕೂ ಹೆಚ್ಚು ಚಿನ್ನ ಇಂಗ್ಲೆಂಡ್‌ ಮತ್ತು ಸ್ವಿಸ್‌ ಬ್ಯಾಂಕ್‌ಗಳಲ್ಲಿವೆ.
-ಪ್ರಸ್ತುತ ಇಂಗ್ಲೆಂಡ್‌ನಿಂದ 100 ಟನ್‌ ಚಿನ್ನ ವಾಪಸ್‌ ಬಂದಿದೆ.
-ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಟನ್‌ ಚಿನ್ನ ದೇಶಕ್ಕೆ ಮರಳುವ ನಿರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next