Advertisement

ಟೋಕನೈಸೇಶನ್‌ ವ್ಯವಸ್ಥೆಗೆ ಆರ್‌ಬಿಐ ಅನುಮತಿ

11:13 AM Oct 14, 2023 | Team Udayavani |

ಹೊಸದಿಲ್ಲಿ: ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಆರ್‌ಬಿಐ ಟೋಕನೈಸೇಶನ್‌ ವ್ಯವಸ್ಥೆ ಜಾರಿಗೆ ಅನುಮತಿಸಿದೆ.

Advertisement

ಸದ್ಯಕ್ಕೆ ಗ್ರಾಹಕರು ತಮ್ಮ  ಡೆಬಿಟ್‌ ಕಾರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ ಪೇಮೆಂಟ್‌ ಮಾಡುವಾಗ ಟೋಕನ್‌ಗಳನ್ನು ಜನರೇಟ್‌ ಮಾಡಬಹುದು. ಇದರಿಂದ ಗ್ರಾಹಕರು, ತಮ್ಮ ಕಾರ್ಡ್‌ನ ಸಂಪೂರ್ಣ ವಿವರಗಳನ್ನು ನೀಡುವುದು ತಪ್ಪಲಿದೆ.

ಪಾವತಿ ಸಂಗ್ರಾಹಕರು, ವ್ಯಾಲೆಟ್‌ಗಳು ಮತ್ತು ಆನ್‌ಲೈನ್‌ ವ್ಯಾಪಾರಿಗಳಿಗೆ ಪೂರ್ಣ ಕಾರ್ಡ್‌ ವಿವರಗಳು ಒಳಗೊಂ =ಡಂತೆ ಯಾವುದೇ ಸೂಕ್ಷ್ಮ ಕಾರ್ಡ್‌ ಸಂಬಂಧಿತ ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸದಂತೆ ಆರ್‌ಬಿಐ 2022ರ ಅ.1ರಂದು ನಿರ್ದೇಶಿಸಿದೆ. ಗ್ರಾಹಕರು ಮರ್ಚೆಂಟ್‌ ವೆಬ್‌ಸೈಟ್‌ಗಳಲ್ಲಿ ವಹಿವಾಟು ನಡೆಸುವಾಗ ಚೆಕ್‌ಔಟ್‌ ಸಮಯದಲ್ಲಿ “ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಕಾರ್ಡ್‌ ಅನ್ನು ಸುರಕ್ಷಿತಗೊಳಿಸುವ ಆಯ್ಕೆ’ ನಿಮಗೆ ಸಿಗಲಿದೆ. ಇದನ್ನು ನೀವು ಆಯ್ಕೆ ಮಾಡಿದರೆ, ಟೋಕನ್‌ ಜನರೇಟ್‌ ಆಗಲಿದೆ. ಇದರಿಂದ ಮರ್ಚೆಂಟ್‌ ಡೇಟಾ ಬೇಸ್‌ನಲ್ಲಿ ಕಾರ್ಡ್‌ ವಿವರಗಳು ಸಂಗ್ರಹವಾಗುವ ಬದಲು ಟೋಕನ್‌ ವಿವರ ಮಾತ್ರ ಸಂಗ್ರಹವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next