Advertisement

ಪ್ರಥಮ ದರ್ಜೆ ಕ್ರಿಕೆಟ್‌ಗೆ ರಾಯುಡು ವಿದಾಯ

06:50 AM Nov 05, 2018 | Team Udayavani |

ಹೈದರಾಬಾದ್‌: ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಏಕದಿನ ಹಾಗೂ ಟಿ20 ಕ್ರಿಕೆಟ್‌ ಕೂಟದತ್ತ ಹೆಚ್ಚಿನ ಗಮನ ಹರಿಸುವ ದೃಷ್ಟಿಯಿಂದ 33 ವರ್ಷದ ರಾಯುಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ ಹಾಗೂ ದೇಶೀಯ ಚುಟುಕು ಮಾದರಿ ಕ್ರಿಕೆಟ್‌ಗೆ ಮುಂದೆ ಲಭ್ಯವಾಗಲಿದ್ದೇನೆ. ಉಳಿದಂತೆ ದೇಶಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇನೆ. ಅವಕಾಶ ನೀಡಿದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ, ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ , ಬರೋಡ ಕ್ರಿಕೆಟ್‌ ಸಂಸ್ಥೆ ಹಾಗೂ ವಿದರ್ಭ ಕ್ರಿಕೆಟ್‌ ಸಂಸ್ಥೆಗೆ ಧನ್ಯವಾದಗಳು ಎಂದು ಎಚ್‌ಸಿಎ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ರಾಯುಡು 97 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದಿಂದ 16 ಶತಕ, 34 ಅರ್ಧಶತಕ ಒಳಗೊಂಡ ಒಟ್ಟು 6151 ರನ್‌ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next