Advertisement

Gautam Singhania: ಪತ್ನಿಯಿಂದ ಬೇರ್ಪಟ್ಟ ರೇಮಂಡ್‌ ಮಾಲೀಕ ಗೌತಮ್‌ ಸಿಂಘಾನಿಯಾ

03:25 PM Nov 13, 2023 | |

ನವದೆಹಲಿ: ಖ್ಯಾತ ಕೈಗಾರಿಕೋದ್ಯಮಿ, ರೇಮಂಡ್‌ ಲಿಮಿಟೆಡ್‌ ನ ಅಧ್ಯಕ್ಷ, ಆಡಳಿತ ನಿರ್ದೇಶಕ ಗೌತಮ್‌ ಸಿಂಘಾನಿಯಾ ಅವರು ಪತ್ನಿ ನವಾಜ್‌ ಮೋದಿ ಸಿಂಘಾನಿಯಾ ಅವರಿಂದ ಪ್ರತ್ಯೇಕಗೊಂಡಿರುವುದಾಗಿ ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ ತಮ್ಮಿಬ್ಬರ 32 ವರ್ಷಗಳ ದಾಂಪತ್ಯ ಕೊನೆಗೊಂಡಿರುವುದಾಗಿ ಘೋಷಿಸಿದ್ದಾರೆ.

Advertisement

ಇದನ್ನೂ ಓದಿ:Diwali:‌ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿಕೊಂಡ್ರಾ ರಶ್ಮಿಕಾ? ಫ್ಯಾನ್ಸ್ ಹೇಳಿದ್ದೇನು?

ಗೌತಮ್‌ ಸಿಂಘಾನಿಯಾ ಅವರು ಪಾರ್ಸಿ ಜನಾಂಗದ ನವಾಜ್‌ ಮೋದಿ ಅವರನ್ನು 1999ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು(ನಿಹಾರಿಕಾ, ನಿಶಾ ಸಿಂಘಾನಿಯಾ). ಗೌತಮ್‌ ಸಿಂಘಾನಿಯಾ ಚಿಕ್ಕಂದಿನಿಂದಲೇ ವಿಟಲಿಗೋ (ಬಿಳಿ ಚರ್ಮದ ವ್ಯಾಧಿ) ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಸುಮಾರು ಎಂಟು ವರ್ಷಗಳ ಕಾಲ ಸಿಂಘಾನಿಯಾ ಮತ್ತು ನವಾಜ್‌ ಸ್ನೇಹದಲ್ಲಿದ್ದು, 1999ರಲ್ಲಿ ಸಾಲಿಸಿಟರ್‌ ನಾಡಾರ್‌ ಮೋದಿ ಅವರ ಪುತ್ರಿ ನವಾಜ್‌ ಅವರನ್ನು ಸಿಂಘಾನಿಯಾ ವಿವಾಹವಾಗಿದ್ದರು.

32 ವರ್ಷಗಳ ಕಾಲ ದಂಪತಿಯಾಗಿದ್ದ ನಾವು ಇದೀಗ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದೇವೆ. ಇಬ್ಬರು ಯಾಕೆ ಬೇರೆಯಾಗುತ್ತಿದ್ದೇವೆ ಎಂಬುದಕ್ಕೆ ಸಿಂಘಾನಿಯಾ ಯಾವುದೇ ವಿವರಣೆ ನೀಡಿಲ್ಲ. ಆದರೆ ನಮ್ಮಿಬ್ಬರ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ, ಟೀಕೆ ವ್ಯಕ್ತಪಡಿಸದೇ, ತಮ್ಮ ನಿರ್ಧಾರಕ್ಕೆ ಗೌರವ ನೀಡುವಂತೆ ಸಿಂಘಾನಿಯಾ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ಕಳೆದ ವಾರ ಥಾಣೆಯಲ್ಲಿರುವ ಸಿಂಘಾನಿಯಾ ನಿವಾಸದಲ್ಲಿ ನಡೆಯುತ್ತಿದ್ದ ದೀಪಾವಳಿ ಪಾರ್ಟಿಗೆ ಆಗಮಿಸಿದ್ದ ನವಾಜ್‌ ಅವರನ್ನು ಸೆಕ್ಯುರಿಟಿ ಒಳ ಬರಲು ತಡೆದು ವಾಪಸ್‌ ಕಳುಹಿಸಿದ್ದ ಘಟನೆ ನಡೆದಿತ್ತು.

ನವಾಜ್‌ ಮುಂಬೈನಲ್ಲಿ ಜನಿಸಿದ್ದು, ತಂದೆ ವಕೀಲರಾಗಿದ್ದು, ಈಕೆ 10 ವರ್ಷದ ಬಾಲಕಿಯಾಗಿದ್ದಾಗಲೇ ಪೋಷಕರು ವಿಚ್ಛೇದನ ಪಡೆದುಕೊಂಡಿದ್ದರು. ನವಾಜ್‌ ಕಾನೂನು ಪದವಿ ಪಡೆದಿದ್ದರು. ನವಾಜ್‌ ಚಿಕ್ಕ ವಯಸ್ಸಿನಲ್ಲೇ ಕ್ರೀಡೆ ಮತ್ತು ಫಿಟ್ನೆಸ್‌ ಬಗ್ಗೆ ಆಸಕ್ತಿ ಹೊಂದಿದ್ದರು. ಪದವಿ ನಂತರ ನವಾಜ್‌ ಅಮೆರಿಕದ ಐಡಿಇಎ(ದ ಇಂಟರ್‌ ನ್ಯಾಷನಲ್‌ ಡ್ಯಾನ್ಸ್‌ ಎಕ್ಸ್‌ ಸೈಸ್‌ ಅಸೋಸಿಯೇಶನ್)ನಲ್ಲಿ ತರಬೇತಿ ಪಡೆದಿದ್ದರು.  ಇಲ್ಲಿ ಅಧಿಕೃತ ಪ್ರಮಾಣಪತ್ರ ಪಡೆದ ಬಳಿಕ ನವಾಜ್‌ ಮುಂಬೈನಲ್ಲಿ Body Art ಫಿಟ್ನೆಸ್‌ ಕೇಂದ್ರ ತೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next