Advertisement

ಟ್ರೆಂಡಿ ಹುಡ್ಗನ ಪ್ರೀತಿ ಗೀತಿ ಇತ್ಯಾದಿ….: ‘ರೇಮೊ’ ಚಿತ್ರ ವಿಮರ್ಶೆ

01:09 PM Nov 26, 2022 | Team Udayavani |

ಲವ್‌ ಸ್ಟೋರಿಗಳನ್ನು ನೀವು ಬೇರೆ ಬೇರೆ ರೂಪದಲ್ಲಿ ಹೇಳಬಹುದು. ಅದೇ ಕಾರಣದಿಂದ ಚಿತ್ರರಂಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ, ಚಿರನೂತನವಾಗಿ ಉಳಿದಿರುವ ಖಾಯಂ ಟ್ರೆಂಡ್‌ ಎಂದರೆ ಅದು ಲವ್‌ಸ್ಟೋರಿಗಳದ್ದು. ಆ ಮಟ್ಟಿಗೆ ಲವ್‌ಸ್ಟೋರಿಗಳ ಎಲ್ಲಾ ಭಾಷೆಗಳ ಚಿರನೂತರನವಾದ ಟ್ರೆಂಡ್‌ ಎಂದರೆ ತಪ್ಪಿಲ್ಲ. ಇದೇ ಕಾರಣದಿಂದ ನಿರ್ದೇಶಕ ಪವನ್‌ ಒಡೆಯರ್‌ ಕೂಡಾ “ರೇಮೊ’ ಸಿನಿಮಾದಲ್ಲಿ ಒಂದು ಹೊಸ ಬಗೆಯ ಲವ್‌ ಸ್ಟೋರಿಯನ್ನು ಕಟ್ಟಿಕೊಟ್ಟಿದ್ದಾರೆ. ಒಬ್ಬ ಇವತ್ತಿನ ಟ್ರೆಂಡಿ ಹುಡುಗನ ಲೈಫ್ನಲ್ಲಿ ನಡೆಯುವ ಒಂದು ಕಥೆಯನ್ನು ವಿಭಿನ್ನವಾಗಿ ಹೇಳಿದ್ದಾರೆ. ಆ ಮಟ್ಟಿಗೆ “ರೇಮೊ’ ಒಂದು ಯೂತ್‌ಫ‌ುಲ್‌ ಲವ್‌ಸ್ಟೋರಿ.

Advertisement

ಪ್ರೇಮಕಥೆಗಳಿಗೆ ಇರೋದು ಎರಡೇ ಕ್ಲೈಮ್ಯಾಕ್ಸ್‌ ದುಖಾಂತ್ಯ ಹಾಗ ಸುಖಾಂತ್ಯ. ಇದರ ಮಧ್ಯೆ ನಡೆಯುವ ಕಥೆಯನ್ನು ಪವನ್‌ ಎಷ್ಟು ಮಜವಾಗಿ ಹೇಳಬಹುದೋ ಆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ.

ರೇಮೊ ಎಂಬ ಒಬ್ಬ ಸಖತ್‌ ಸ್ಟೈಲಿಶ್‌, ಡ್ಯಾಶಿಂಗ್‌, ಟ್ರೆಂಡಿ ಹುಡುಗ ಒಂದು ಕಡೆಯಾದರೆ ಮೋಹನ ಎಂಬ ಕೋಗಿಲೆ ಕಂಠದ ಬೆಡಗಿ ಮತ್ತೂಂದು ಕಡೆ… ಹಾಗಂತ “ರೇಮೊ’ ಇವರಿಬ್ಬರ ಮಧ್ಯೆಯಷ್ಟೇ ಸುತ್ತುವುದಿಲ್ಲ. ಅದರಾಚೆ ಒಂದು ಫ್ಯಾಮಿಲಿ ಸ್ಟೋರಿ ಇದೆ, ಸೆಂಟಿಮೆಂಟ್‌ ಇದೆ, ತ್ಯಾಗವೂ ಇದೆ. ಇವೆಲ್ಲವೂ ಲವ್‌ಸ್ಟೋರಿಗೆ ಪೂರಕವಾಗಿಯೇ ಸಾಗುತ್ತದೆ. ಕಲರ್‌ಫ‌ುಲ್‌ ಆಗಿಯೇ ಸಾಗುವ ಸಿನಿಮಾದ ಮೊದಲರ್ಧವನ್ನು ಯೂತ್‌ಗೆ ಹಾಗೂ ದ್ವಿತೀಯಾರ್ಧವನ್ನು ಫ್ಯಾಮಿಲಿಗೆ ಮೀಸಲಿಟ್ಟಿದ್ದಾರೆ ಪವನ್‌.

ಚಿತ್ರದಲ್ಲಿ ಸಾಕಷ್ಟು ದೃಶ್ಯಗಳು, ಸನ್ನಿವೇಶಗಳು ಇದ್ದರೂ ಯಾವುದೇ ಗೊಂದಲವಿಲ್ಲದಂತೆ ಕಟ್ಟಿಕೊಡಲಾಗಿದೆ. ಆ್ಯಕ್ಷನ್‌ ಪ್ರಿಯರಿಗೆ ಬೇಕಾದ ಆ್ಯಕ್ಷನ್‌, ಯೂತ್ಸ್ಗಾಗಿ ಲವ್‌, ರೊಮ್ಯಾನ್ಸ್‌, ಫ್ಯಾಮಿಲಿಗಾಗಿ ಸೆಂಟಿಮೆಂಟ್‌… ಹೀಗೆ ಎಲ್ಲದರ ಮಿಶ್ರಣ ಈ ರೇಮೊ.

ಇಡೀ ಸಿನಿಮಾದುದ್ದಕ್ಕೂ ಸ್ಟೈಲಿಶ್‌ ಹುಡುಗನಾಗಿ ಕಾಣಿಸಿಕೊಂಡಿರುವ ಇಶಾನ್‌ಗೆ ಈ ಸಿನಿಮಾದಲ್ಲಿ ತಮ್ಮ ಸಾಮರ್ಥ್ಯ ತೋರಿಸುವ ಪಾತ್ರ ಸಿಕ್ಕಿದೆ. ಕಮರ್ಷಿಯಲ್‌ ಹೀರೋ ಆಗಿ ನೆಲೆ ನಿಲ್ಲಲು ಬೇಕಾದ ಎಲ್ಲಾ ಅಂಶಗಳನ್ನು ಇಶಾನ್‌ ಈ ಚಿತ್ರದಲ್ಲಿ ತೋರಿಸಿ, ಭವಿಷ್ಯದ ಭರವಸೆ ಮೂಡಿಸಿದ್ದಾರೆ. ನಾಯಕಿ ಆಶಿಕಾಗೆ ಇಲ್ಲಿ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದೆ. ಎರಡರಲ್ಲೂ ಆಶಿಕಾ ಮಿಂಚಿದ್ದಾರೆ. ಉಳಿದಂತೆ ಮಧುಬಾಲ, ಶರತ್‌, ರಾಜೇಶ್‌ ನಟರಂಗ ಸೇರಿದಂತೆ ಇತರರು ನಟಿಸಿದ್ದಾರೆ. ವಿಭಿನ್ನಲವ್‌ಸ್ಟೋರಿಯನ್ನು ಇಷ್ಟಪಡುವವರಿಗೆ ರೇಮೋ ಕೂಡಾ ಇಷ್ಟವಾಗಬಹುದು.

Advertisement

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next