Advertisement

ಸ್ಟೈಲಿಶ್ ಹುಡುಗನ ಲವ್ ಸ್ಟೋರಿ ‘ರೇಮೋ’ ಇಂದು ತೆರೆಗೆ

10:06 AM Nov 25, 2022 | Team Udayavani |

ಯುವ ನಟ ಇಶಾನ್‌ ಮತ್ತು ಆಶಿಕಾ ರಂಗನಾಥ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ “ರೇಮೋ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. “ಜೈ ಆದಿತ್ಯ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರೇಮೋ’ ಚಿತ್ರಕ್ಕೆ ಕನ್ನಡ ಚಿತ್ರರಂಗದ ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸಿ.ಆರ್‌ ಮನೋಹರ್‌ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಪವನ್‌ ಒಡೆಯರ್‌ “ರೇಮೋ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

Advertisement

ಟ್ರೆಂಡಿ ಲವ್‌ಸ್ಟೋರಿ : “ರೇಮೋ’ ಪವನ್‌ ಒಡೆಯರ್‌ ಅವರ ಇಷ್ಟು ವರ್ಷಗಳ ಸಿನಿಮಾ ಕೆರಿಯರ್‌ ನಲ್ಲೇ ಬಿಗ್‌ ಬಜೆಟ್‌ ಆ್ಯಂಡ್‌ ಹೈ ವೋಲ್ಟೆಜ್‌ ಸಿನಿಮಾ ಅಂಥ ಅವರೇ ಹೇಳುತ್ತಾರೆ.

ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪವನ್‌ ಒಡೆಯರ್‌, “ಇದೊಂದು ಇಂದಿನ ಜನರೇಶನ್‌ ಸಿನಿಮಾ. ಇದರಲ್ಲಿ ಲವ್‌, ರಿಲೇಶನ್‌ಶಿಪ್‌, ಆ್ಯಕ್ಷನ್‌, ಪ್ರಸೆಂಟೇಶನ್‌ ಎಲ್ಲವೂ ಹೊಸದಾಗಿದೆ. ಇದೊಂದು ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಇರುವಂಥ ಸಿನಿಮಾ. ಆಡಿಯನ್ಸ್‌ ಏನೇನು ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಲು ಬರುತ್ತಾರೋ, ಅದೆಲ್ಲವೂ “ರೇಮೋ’ದಲ್ಲಿ ಇರಲಿದೆ.  ಕನ್ನಡ ಪ್ರೇಕ್ಷಕರಿಗೆ “ರೇಮೋ’ ಸಿನಿಮಾ ಹೊಸಥರದ ಅನುಭವ ನೀಡಲಿದೆ’ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.

ಮ್ಯೂಸಿಕಲ್‌ ಜರ್ನಿ: “ರೇಮೋ’ ಒಂದು ಸಂಗೀತ ಪ್ರಧಾನ ಚಿತ್ರವಾಗಿದ್ದು, ಸೋನು ನಿಗಮ್‌, ಸಿದ್ಧ್ ಶ್ರೀರಾಮ್‌ ಸೇರಿದಂತೆ ಅನೇಕ ಖ್ಯಾತ ಗಾಯಕರು ಹಾಡಿದ್ದಾರೆ. “ನಾನು ತುಂಬಾ ದಿನಗಳ ನಂತರ ಮಾಡುತ್ತಿರುವ ಲವ್‌ಸ್ಟೋರಿ ಇದು. ಲವ್‌ಸ್ಟೋರಿ ಎಂದ ಮೇಲೆ ಒಳ್ಳೆಯ ಹಾಡುಗಳು ಇರಲೇ ಬೇಕು. ಹಾಗಾಗಿ, ಹಾಡಿಗೆ, ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೇನೆ.  ಖ್ಯಾತ ಗಾಯಕರು ನಮ್ಮ ಚಿತ್ರದಲ್ಲಿ ಹಾಡಿದ್ದಾರೆ’ ಎನ್ನುವುದು ಪವನ್‌ ಮಾತು.

ಇನ್ನು “ರೇಮೋ’ ಚಿತ್ರದಲ್ಲಿ ಇಶಾನ್‌, ಅಶಿಕಾ ರಂಗನಾಥ್‌ ಅವರೊಂದಿಗೆ ತಮಿಳು ನಟ ಶರತ್‌ ಕುಮಾರ್‌, ಮಧುಬಾಲ, ರಾಜೇಶ್‌ ನಟರಂಗ, ಅಚ್ಯುತ್‌ ಕುಮಾರ್‌ ಹೀಗೆ ಅನೇಕ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. “ರೆಮೋ’ ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ವೈದಿ ಛಾಯಾಗ್ರಹಣವಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next