Advertisement

ರಾಯರಡ್ಡಿ ದೇಶದ ಜನತೆ ಕ್ಷಮೆ ಕೇಳಲಿ

03:39 PM Apr 23, 2017 | Team Udayavani |

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಕೂಡಲೇ ದೇಶದ ಜನತೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಬೇಕು ಎಂದು ಮಹಾನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು. 

Advertisement

ರಾಯರಡ್ಡಿ ತುಂಬಾ ತಿಳಿವಳಿಕೆ ಇರುವವರು ಎಂದು ತಿಳಿಯಲಾಗಿತ್ತು. ಅಮೆರಿಕದಂತಹ ರಾಷ್ಟ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಕೊಡುವಾಗ ದೇಶದ ಕರ್ನಾಟಕದ ಉನ್ನತ ಶಿಕ್ಷಣ ಸಚಿವರಾಗಿದ್ದುಕೊಂಡು ಪ್ರಧಾನಿ ಸತ್ತರೆ ಸಾಯಲಿ ಬಿಡಿ ಎನ್ನುವಂತೆ ಮಾತನಾಡಿರುವುದು ಶೋಭೆ ತರುವ ವಿಚಾರವಲ್ಲ.

ಆದ್ದರಿಂದ ಕೂಡಲೇ ದೇಶದ ಜನತೆ ಕ್ಷಮೆ ಕೇಳಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಯುವ ಕಾರ್ಯಕರ್ತರು ಆಗ್ರಹಿಸಿದರು. ಈ ವೇಳೆ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಹಾನಗರ ಜಿಲ್ಲಾಧ್ಯಕ್ಷ ಮಲ್ಲು ಉದನೂರು, ರಾಜ್ಯ ಮೋರ್ಚಾ ಉಪಾಧ್ಯಕ್ಷ ಪರಶುರಾಮ ನಸಲವಾಯು,

ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶರಣು ಸಜ್ಜನ್‌, ಕೈಲಾಶ ಪಾಟೀಲ ಅಂಕಲಗಿ, ಪ್ರವೀಣ ನಾಯಕ, ನಾಗರಾಜ ಉಪಾಸೇ, ಶ್ರೀಧರ ಚವ್ಹಾಣ, ಸುನೀಲ ಮಹಾಗಾಂವ, ಯಲ್ಲಾಲಿಂಗ ಪೂಜಾರಿ, ಸಚೀನ್‌ ನಿಗ್ಗುಡಗಿ, ಅಂಬರೇಷ, ಸಂಗು ಕೆ. ಇತರರು ಇದ್ದರು.

ಅಫಜಲಪುರ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಬಸವರಾಜ ರಾಯರಡ್ಡಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಬಿಜೆಪಿ ಯುವ ಘಟಕದ ಅಧ್ಯಕ್ಷ ಅಂಬರೀಷ ಮೇತ್ರಿ ತಹಶೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಆಗ್ರಹಿಸಿದರು. 

Advertisement

ಪುರಸಭೆ ಸದಸ್ಯರಾದ ಸಿದ್ದರಾಮ ಗಣಾಚಾರಿ, ಹಣಮಂತ ವಡ್ಡರ, ವಿನೋದ ರಾಠೊಡ ಮುಖಂಡರಾದ ಸುನೀಲ ಶೆಟ್ಟಿ, ಅಪ್ಪಾಶಾ ಮುರಳಿ, ಚೆನ್ನಬಸವರಾಜ ಮನ್ನಿ, ಧನರಾಜ ಕೆಂಗನಳ್ಳಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು. ನಂತರ ಪ್ರತಿಭಟನಾಕಾರರು ತಹಶೀಲ್ದಾರ ಶಶಿಕಲಾ ಪಾದಗಟ್ಟಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next