Advertisement

ಕ್ರಾಂತಿ ರಣಕಹಳೆ ಮೊಳಗಿಸಿದ್ದು ರಾಯಣ್ಣ

10:53 AM Nov 26, 2021 | Team Udayavani |

ಶಹಾಬಾದ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷ್‌ ಸಾಮ್ರಾಜ್ಯದ ಎದೆ ನಡುಗಿಸಿದ, ತನ್ನ ಅಪಾರ ಶೌರ್ಯ ಪರಾಕ್ರಮಗಳಿಂದ ಬ್ರಿಟಿಷರಿಗೆ ಸವಾಲಾಗಿ ನಿಂತು ಕ್ರಾಂತಿಯ ರಣಕಹಳೆ ಮೊಳಗಿಸಿದ್ದು ಕನ್ನಡ ನಾಡಿನ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಸಂಗೋಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ ಹೇಳಿದರು.

Advertisement

ನಗರದಲ್ಲಿ ಕುರುಬ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೋಳಿ ರಾಯಣ್ಣ ಯುವಕರ ಸಂಘ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಹುತೇಕರಿಗೆ ತಿಳಿಯದ ಅಚ್ಚರಿಯೆಂದರೆ, ರಾಯಣ್ಣ ಹುಟ್ಟಿದ್ದು ಆಗಸ್ಟ್‌ 15 ರಂದು ಮತ್ತು ದೇಶಕ್ಕಾಗಿ ಬಲಿದಾನ ಮಾಡಿದ್ದು ಜನವರಿ 26 (15 ಆಗಸ್ಟ್‌ 1798 – 26 ಜನವರಿ 1831). ಒಂದು ಸ್ವಾತಂತ್ರ್ಯ ದಿನ, ಮತ್ತೊಂದು ಗಣರಾಜ್ಯ ದಿನ. ಎರಡೂ ದಿನಗಳೂ ಭಾರತೀಯರ ಪಾಲಿಗೆ ಅವಿಸ್ಮರಣೀಯ ದಿನಗಳು ಎಂದರು.

ಬ್ರಿಟಿಷರ ದಬ್ಟಾಳಿಕೆ ಮೆಟ್ಟಿನಿಂತು ಕೆಚ್ಚೆದೆಯಿಂದ ಅವರ ವಿರುದ್ಧ ಸಮರ ಸಾರಿದ ಕನ್ನಡದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿದ್ದ ರಾಯಣ್ಣ. ದೇಶಕ್ಕಾಗಿ ಅವನ ತ್ಯಾಗ ಅವಿಸ್ಮರಣೀಯವಾದದ್ದು. ಅವರ ಹೆಸರಿನಲ್ಲಿ ಸಂಘ ಸ್ಥಾಪನೆಯಾಗಿದ್ದು, ಸಮಾಜದ ಒಳತಿಗೆ ಕಾರ್ಯನಿರ್ವಹಿಸಲಿ ಎಂದು ಹೇಳಿದರು.

ಕುರುಬ ಸಮಾಜದ ಅಧ್ಯಕ್ಷ ಮಲ್ಕಣ್ಣ ಮುದ್ದಾ ಮಾತನಾಡಿ, ತನ್ನವರದೇ ಮೋಸಕ್ಕೆ ಒಳಗಾಗಿ ಚೆನ್ನಮ್ಮ ಬ್ರಿಟಿಷರ ಸೆರೆಗೆ ಸಿಕ್ಕಾಗ ಕಿತ್ತೂರಿನ ಪರವಾಗಿ ಕ್ರಾಂತಿ ಕಹಳೆ ಮೊಳಗಿಸಿದ ಗಂಡುಗಲಿ ರಾಯಣ್ಣ. ಕಿತ್ತೂರು ಚೆನ್ನಮ್ಮನ ಸೇನೆಯ ಅಧಿಪತಿಯಾಗಿದ್ದ. ದೊಡ್ಡ ದೇಶಭಕ್ತರ ಪಡೆಯನ್ನೇ ಕಟ್ಟಿದ್ದ. ಅದೇ ರೀತಿ ರಾಯಣ್ಣ ಸಂಘದವರು ಯುವ ಪಡೆ ಕಟ್ಟಿ ಉತ್ತಮ ಮಾರ್ಗದಲ್ಲಿ ಸಾಗಲಿ. ದುಶ್ಚಟಗಳಿಂದ ದೂರವಿದ್ದು, ಸಮಾಜಮುಖೀ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಹೇಳಿದರು.

ಹೊನಗುಂಟಾದ ಪೂಜ್ಯ ಪದ್ಮಣಪ್ಪ ಮುತ್ಯಾ ಉದ್ಘಾಟಿಸಿದರು. ಕುರುಬ ಗೊಂಡ ಸಮಾಜದ ಅಧ್ಯಕ್ಷ ಸಾಯಬಣ್ಣ ಕೊಲ್ಲೂರ್‌, ನಿಂಗಣ್ಣ ಪೂಜಾರಿ, ಮರಲಿಂಗ ಕಮರಡಗಿ, ಸುರೇಶ ಗಿರಣಿ, ಸುನೀಲ ಪೂಜಾರಿ, ದತ್ತಾ ಪಂಡ್‌, ಅನೀಲ ದೊಡ್ಮನಿ, ಮಂಜುನಾಥ ದೊಡ್ಮನಿ, ಶ್ರೀಕಾಂತ ಕಟ್ಟಿ, ಸಂಗಣ್ಣ ಕಂಠಿಕಾರ, ವಿಜಯಕುಮಾರ ಕಂಠಿಕಾರ,ಯಲ್ಲಾಲಿಂಗ ಕರಗಾರ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next