Advertisement

ಮತದಾನ ಹೆಚ್ಚಳಕ್ಕೆ ಪತ್ರಕರ್ತರ ಸಹಕಾರ ಶ್ಲಾಘನೀಯ

04:03 PM Apr 11, 2019 | Naveen |

ರಾಯಚೂರು: ಮತದಾನ ಹೆಚ್ಚಳಕ್ಕೆ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿ ಜನ ಜಾಗೃತಿ ಮೂಡಿಸುತ್ತಿದೆ. ಆ ಕೆಲಸಕ್ಕೆ ಪತ್ರಕರ್ತರು ಕೂಡ ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಯಚೂರು ರಿಪೋರ್ಟರ್ ಗಿಲ್ಡ್‌ ಸಹಕಾರದಲ್ಲಿ ಪತ್ರಕರ್ತರು ನಿರ್ಮಿಸಿ, ವಿಜಯ್‌ ಜಾಗಟಗಲ್‌ ನಿರ್ದೇಶಿಸಿದ ವೈಲೆಟ್‌ ಇಂಕ್‌-2 ಹಾಗೂ ಹೋಪ್‌ ಎಂಬ 2 ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹುದೊಡ್ಡ ಅಸ್ತ್ರವಿದ್ದಂತೆ. ಮತದಾನ ಪ್ರಕ್ರಿಯೆ ಅಮೂಲ್ಯವಾಗಿದ್ದು, ಜಿಲ್ಲಾ ಸ್ವೀಪ್‌ ಸಮಿತಿಯಿಂದ ಹಲವು ರೀತಿಯ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಒತ್ತಡದ ಕೆಲಸದ
ನಡುವೆಯೂ ಮತದಾನ ಹೆಚ್ಚಳಕ್ಕೆ ಜನ ಜಾಗೃತಿಗಾಗಿ ಬಹುತೇಕ ಪತ್ರಕರ್ತರೇ ಅಭಿನಯಿಸಿ ಮಹತ್ವದ ಸಂದೇಶ ಸಾರುವ ಕಿರುಚಿತ್ರಗಳನ್ನು ನಿರ್ಮಿಸಿರುವುದು ಪ್ರಶಂಶನೀಯ ಎಂದರು.

ಎಸ್ಪಿ ಡಿ.ಕಿಶೋರಬಾಬು ಮಾತನಾಡಿ, ಮಾಧ್ಯಮ ಪ್ರತಿನಿಧಿಗಳು ನಿರ್ಮಿಸಿದ ಈ ಕಿರುಚಿತ್ರದಿಂದ ಮತದಾರರು ಪ್ರೇರಿತರಾಗಿ ಜನ ಮತ ಚಲಾಯಿಸಿದರೆ ಪತ್ರಕರ್ತರ ಪ್ರಯತ್ನಕ್ಕೂ ಅರ್ಥ ಬರುತ್ತದೆ ಎಂದರು.

ಜಿಪಂ ಸಿಇಒ ನಲಿನ್‌ ಅತುಲ್‌ ಮಾತನಾಡಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್‌, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಕಾರ್ಯದರ್ಶಿ ಗುರುನಾಥ, ಪತ್ರಕರ್ತರಾದ ಬಿ.ವೆಂಕಟಸಿಂಗ್‌, ಚನ್ನಬಸವಣ್ಣ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next