Advertisement

ಸಿಂಧನೂರು ಕ್ಷೇತ್ರದಲ್ಲಿ “ಎನ್‌ಸಿಪಿ’ಕಸರತ್ತು ಶುರು

03:06 PM Oct 20, 2021 | Team Udayavani |

ಸಿಂಧನೂರು: ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಮುಖಂಡರ ಸದ್ದನ್ನೇ ಕೇಳುತ್ತಿದ್ದ ಕ್ಷೇತ್ರದಲ್ಲಿ ಈಗನ್ಯಾಷಲಿಷ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ)ಅಭ್ಯರ್ಥಿಯ ಹಂಗಾಮ ಚರ್ಚೆ ಧೂಳೆಬ್ಬಿಸಿದೆ.ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿರುವ ಹರೀಶ್‌ ಕಳೆದ ಒಂದೂವರೆ ತಿಂಗಳಿಂದ ಕ್ಷೇತ್ರದಲ್ಲಿಪರ್ಯಟನೆ ಆರಂಭಿಸಿದ್ದಾರೆ.

Advertisement

ರಾಜ್ಯದ ಎಲ್ಲಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿಹೇಳಿಕೊಂಡಿರುವ ರಾಜ್ಯಾಧ್ಯಕ್ಷರು ತಮ್ಮ ಕಾರ್ಯಕ್ಷೇತ್ರವನ್ನಾಗಿ ಸಿಂಧನೂರನ್ನು ಆಯ್ಕೆ ಮಾಡಿಕೊಂಡಬೆಳವಣಿಗೆ ಕುತೂಹಲ ಮೂಡಿಸಿದೆ.ಮೂರ್ತಿ ಪ್ರತಿಷ್ಠಾನೆಗೆ ನೆರವು: ಸ್ವಾರಸ್ಯ ಎಂದರೆ,ಎನ್‌ಸಿಪಿ ರಾಜ್ಯಾಧ್ಯಕ್ಷ ಹರೀಶ್‌ ಕಳೆದ ಒಂದೂವರೆತಿಂಗಳಿಂದ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದರೂ ಬಹುತೇಕ ಕಡೆ ಗುಟ್ಟು ಬಿಟ್ಟುಕೊಟ್ಟಿಲ್ಲ.

ಜನರೇಚರ್ಚಿಸಬೇಕಾದ ರೀತಿಯಲ್ಲಿ ಪೂರಕ ವೇದಿಕೆರೂಪಿಸಿಕೊಳ್ಳತೊಡಗಿದ್ದಾರೆ. ಮಲ್ಕಾಪುರ ಗ್ರಾಮದಲ್ಲಿಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ,ಸುಲ್ತಾನಪುರದಲ್ಲಿ ವಾಲ್ಮೀಕಿ ವೃತ್ತ ಸ್ಥಾಪನೆಗೆ ನೆರವು ನೀಡಿದ್ದಾರೆ.

ಹುಡಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆಸಾಮೂಹಿಕ ಮದುವೆಗಳಿಗೆ ನೆರವು ಕೇಳಿದಾಗಲೂಒಪ್ಪಿಗೆ ಸೂಚಿಸಿದ್ದಾರೆ.ಹೆಚ್ಚಿದ ಕುತೂಹಲ: ಎನ್‌ಸಿಪಿ ವರಿಷ್ಠ ಶರದ್‌ಪವಾರ್‌ ಸೂಚನೆ ಮೇರೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆಮಾಡುತ್ತಿರುವುದಾಗಿ ಹೇಳುತ್ತಿರುವ ಹರೀಶ್‌ ಅವರುಕುರುಬ ಸಮುದಾಯದವರು.

ಸಾಮಾನ್ಯ ವರ್ಗಕ್ಕೆಮೀಸಲಾದ ಕ್ಷೇತ್ರದಲ್ಲಿ ಕುರುಬ ಸಮುದಾಯವೂಹೆಚ್ಚಿನ ಸಂಖ್ಯೆಯಿದೆ. ಇದೇ ಲೆಕ್ಕಾಚಾರದ ಮೇಲೆಈಗಿನಿಂದಲೇ ಮುಂದಿನ 2023 ವಿಧಾನಸಭೆಚುನಾವಣೆಗೆ ಪ್ರಚಾರ ಆರಂಭಿಸಿದ್ದಾರೆ.

Advertisement

ತಾಲೂಕಿನಸುಲ್ತಾನಪುರ, ಮಲ್ಕಾಪುರ, ಸೋಮಲಾಪುರ,ಹುಡಾ, ಸಾಲಗುಂದಾ, ಉಪ್ಪಳ, ಚನ್ನಳ್ಳಿ, ಸಿದ್ರಾಂಪುರಸೇರಿ ಹಲವು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.

ಲೆಕ್ಕಾಚಾರ ಕ್ಲಿಷ್ಟ: ಕಾಂಗ್ರೆಸ್‌, ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಗಳೇ ಕ್ಷೇತ್ರದಲ್ಲಿ ಕಣಕ್ಕಿಳಿಯುವುದುಬಹುತೇಕ ನಿಶ್ಚಿತ. ಇನ್ನು ಬಿಜೆಪಿಯಿಂದಲೂಬಲಿಷ್ಠರನ್ನು ಅಖಾಡಕ್ಕಿಳಿಸುವ ಲೆಕ್ಕಾಚಾರ ನಡೆದಿದೆ.

ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಅಭ್ಯರ್ಥಿ ಎನ್‌ಸಿಪಿ ಅಭ್ಯರ್ಥಿಯೆಂದು ಗುರುತಿಸಿಕೊಂಡು ಪ್ರಚಾರಆರಂಭಿಸಿರುವುದು ಅಚ್ಚರಿಗೆ ಕಾರಣವಾಗಿದೆ.ಈಗಾಗಲೇ ಹಲವು ಅಭ್ಯರ್ಥಿಗಳು ಮಸ್ಕಿ ಉಪಚುನಾವಣೆ ಪ್ರಭಾವ ಎಂಬಂತೆ ಎಲೆಕ್ಷನ್‌ ಮೂಡ್‌ನ‌ಲ್ಲಿ ಇದ್ದಾರೆ. ಇಂತಹ ಹೊತ್ತಿನಲ್ಲಿ ಅನಿರೀಕ್ಷಿತ ಎನ್‌ಸಿಪಿಅಭ್ಯರ್ಥಿ ಎಂಟ್ರಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next