Advertisement
ಮೂರು ದಿನದೊಳಗೆ ಅವರುಜನತೆಯ ಕ್ಷಮೆಯಾಚಿಸಬೇಕು ಎಂದುಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಬಸವರಾಜ ಕಳಸ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜನನಾಯಕರಾದವರು ಅರಸೊತ್ತಿಗೆಮಾತನ್ನಾಡುವುದು ಸರಿಯಲ್ಲ.
Related Articles
Advertisement
ರಾಯಚೂರು ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂದುತೆಲಂಗಾಣಕ್ಕೆ ಸೇರಿಸಿ ಎನ್ನುವುದಲ್ಲ. ಅವರುತಮ್ಮ ಆಕ್ರೋಶವನ್ನು ಸದನದಲ್ಲಿ ತೋರಿಸಲಿ.ಎಂದಾದರೂ ಈ ಬಗ್ಗೆ ಮಾತನಾಡಿದ್ದಾರಾ.ಜಿಲ್ಲೆಗೆ ಬಂದ ಸಚಿವರ ಎದುರು ಪ್ರಾಬಲ್ಯತೋರಲು ಬೇಕಾಬಿಟ್ಟಿ ಹೇಳಿಕೆ ನೀಡುವುದಲ್ಲ.ಏಮ್ಸ್ ವಿಚಾರದಲ್ಲಿ ಎಂದಾದರೂ ಹೇಳಿಕೆನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.ಕರವೇ (ಶಿವರಾಮಗೌಡ ಬಣ)ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್‌ಮಾತನಾಡಿ, ರಾಯಚೂರನ್ನು ತೆಲಂಗಾಣಕ್ಕೆಸೇರಿಸುವುದಾಗಿ ಹೇಳುವ ಶಾಸಕರಿಗೆ ನೈತಿಕತೆಇದೆಯೇ. ಯಾರಪ್ಪನ ಸ್ವತ್ತು ಎಂದು ಇವರುಆ ರೀತಿ ಹೇಳಿಕೆ ನೀಡುತ್ತಾರೆ.
ಅಭಿವೃದ್ಧಿ ಬಗ್ಗೆಮಾತನಾಡುವವರು ಸದನದಲ್ಲಿ ಮಾತನಾಡಲಿ.ಇಲ್ಲಿ ಜನರ ಎದುರು ಶೋಕಿಗಾಗಿಹೇಳುವುದಲ್ಲ. ಕನ್ನಡ ನಾಡು, ನುಡಿ, ಜಲಕ್ಕಾಗಿಕನ್ನಡಪರ ಸಂಘಟನೆಗಳು ಜೀವ ಪಣಕ್ಕಿಟ್ಟುಹೋರಾಟ ಮಾಡಿದರೆ, ಇವರು ಮನಸಿಗೆಬಂದಂತೆ ಮಾತನಾಡುವುದು ಸರಿಯಲ್ಲ.ಶಾಸಕರು ತಮ್ಮ ಹೇಳಿಕೆ ಹಿಂಪಡೆದು ಜನರಕ್ಷಮೆಯಾಚಿಸಲಿ ಎಂದರು.ಸಂಘಟನೆ ಮುಖಂಡರಾದ ಶರಣಪ್ಪಅಸ್ಕಿಹಾಳ, ರಾಜಶೇಖರ ಮಾಚರ್ಲಾ,ಮಹ್ಮದ್ ಮಾಸೂಮ್ ಇದ್ದರು.