Advertisement

ಕುಡಚಿ ಜನರ ಮೇಲೆ ಡ್ರೋಣ ಹದ್ದಿನ ಕಣ್ಣು

05:00 PM Apr 13, 2020 | Naveen |

ರಾಯಬಾಗ: ಕುಡಚಿ ಪಟ್ಟಣದಲ್ಲಿ ರವಿವಾರ ಮತ್ತೆ 3 ಜನರಿಗೆ ಸೋಂಕು ದೃಢಪಟ್ಟಿದ್ದರಿಂದ ಪಟ್ಟಣದಲ್ಲಿ ಹೈ-ಅಲರ್ಟ್‌ ಘೋಷಿಸಲಾಗಿದೆ. ಮನೆಯಿಂದ ಹೊರಗೆ ಬರುವವರ ಮೇಲೆ ಡ್ರೋಣ ಕ್ಯಾಮೆರಾ ಮೂಲಕ ಹದ್ದಿನ ಕಣ್ಣು ಇಡಲಾಗಿದೆ ಎಂದು ತಹಶೀಲ್ದಾರ್‌ ಚಂದ್ರಕಾಂತ ಭಜಂತ್ರಿ ತಿಳಿಸಿದರು.

Advertisement

ಕುಡಚಿ ಪಟ್ಟಣದಲ್ಲಿ ರವಿವಾರದ ವರೆಗೆ ಒಟ್ಟು ಏಳು ಜನರಿಗೆ ಕೋವಿಡ್  ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಪೊಲೀಸ್‌ ಬಂದೋಬಸ್ತ್ ಇನ್ನಷ್ಟು ಕಠಿಣವಾಗಿ ಜಾರಿ ಮಾಡಲಾಗಿದ್ದು, ಪೊಲೀಸರ ಕಣ್ಣು ತಪ್ಪಿಸಿ ಹೊರಗಡೆ ತಿರುಗಾಡುವವರ ಮೇಲೆ ನಿಗಾ ಇಡಲು ಡ್ರೋಣ ಕ್ಯಾಮೆರಾ ಬಳಸಲಾಗುತ್ತಿದೆ. ಕ್ಯಾಮೆರಾದಲ್ಲಿ ಸೆರೆ ಸಿಕ್ಕವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಡಿವೈಎಸ್‌ಪಿ ಗಿರೀಶ ನೇತೃತ್ವದಲ್ಲಿ ಕುಡಚಿ ಪಟ್ಟಣಕ್ಕೆ ಸೇರುವ ಎಲ್ಲ ರಸ್ತೆಗಳನ್ನು ಮತ್ತು ಪಟ್ಟಣವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಜನರು ಹೊರಗೆ ಬಾರದಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮೈಕ್‌ ಮೂಲಕ ಎಚ್ಚರಿಸಲಾಗುತ್ತಿದೆ. ಹಾಲು, ತರಕಾರಿಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಶನಿವಾರದವರೆಗೆ ಪಟ್ಟಣದ 19,900 ಜನರನ್ನು ಥರ್ಮಾ ಮೀಟರ್‌ ಮೂಲಕ ಪರೀಕ್ಷೆ ಮಾಡಲಾಗಿದೆ ಎಂದು ಕುಡಚಿ ಪುರಸಭೆ ಮುಖ್ಯಾ ಧಿಕಾರಿ ಎಸ್‌.ಎ. ಮಹಾಜನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next