Advertisement

ಕಚ್ಚಾವಸ್ತು ಬೆಲೆ ಇಳಿಕೆ: ವಾಹನ ಉತ್ಪಾದಕರು ನಿರಾಳ

12:36 AM Aug 23, 2022 | Team Udayavani |

ಚೆನ್ನೈ: ಸುಮಾರು 20 ತಿಂಗಳುಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವಾಹನ ಉತ್ಪಾದನೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಬೆಲೆ ಈಗ ಕೆಳಗಿಳಿಯಲು ಆರಂಭವಾಗಿದೆ. ಇದರಿಂದ ವಾಹನ ಉತ್ಪಾದಕರು ಮತ್ತು ವಾಹನ ಬಿಡಿಭಾಗ ತಯಾರಕ ಕಂಪೆನಿಗಳಲ್ಲಿ ನಿರೀಕ್ಷೆ ಮೂಡಿದೆಯಲ್ಲದೆ ವಾಹನ ಗ್ರಾಹಕರಿಗೂ ಆಶಾಭಾವನೆ ಉಂಟಾಗಿದೆ.

Advertisement

ಪ್ರಮುಖ ಕಚ್ಚಾ ವಸ್ತುಗಳಾದ ಅಲ್ಯುಮೀನಿಯಂ ಮತ್ತು ಉಕ್ಕಿನ ಬೆಲೆ ಇಳಿಕೆಯಾಗಿದ್ದು, ಇದು ಮುಂದುವರಿಯಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಜೂನ್‌-ಜುಲೈ ಅವಧಿಯಲ್ಲಿ ಉಕ್ಕಿನ ಬೆಲೆಯಲ್ಲಿ ಸರಾಸರಿ ಶೇ. 9ರಷ್ಟು ಇಳಿಕೆಯಾಗಿದೆ. ಅಲ್ಯುಮೀನಿಯಂ ಬೆಲೆ ಶೇ. 15ರಷ್ಟು ತಗ್ಗಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next