Advertisement

ರವಿಶಾಸ್ತ್ರೀಯೇ ಟೀಂ ಇಂಡಿಯಾದ ಮುಂದಿನ ಕೋಚ್‌?

03:14 AM Aug 07, 2019 | Team Udayavani |

ಹೊಸದಿಲ್ಲಿ: ರವಿಶಾಸ್ತ್ರೀಯೇ ಭಾರತದ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆಯಿದೆ. ಈ ಕುರಿತಾದ ಸುಳಿವೊಂದು ಕ್ರಿಕೆಟ್‌ ಸಲಹಾ ಸಮಿತಿಯಿಂದಲೇ ಸಿಕ್ಕಿದೆ.

Advertisement

ಹೊಸ ಕೋಚ್‌ ನೇಮಕಾತಿಗೆ ಈಗಾಗಲೇ ಅರ್ಜಿ ಸ್ವೀಕರಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಜವಾಬ್ದಾರಿಯನ್ನು ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಒಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಜವಾಬ್ದಾರಿ ವಹಿಸಿಕೊಂಡಿದೆ. ಈ ನಡುವೆ ಸಿಎಸಿ ಸಮಿತಿಯ ಅಧಿಕಾರಿಯೊಬ್ಬರ ಪ್ರಕಾರ ಈ ಸಲ ವಿದೇಶಿ ಕೋಚ್‌ಗೆ ಮಣೆ ಹಾಕುವುದು ಅನುಮಾನ. ಮೊದಲ ಅವಕಾಶ ಭಾರತೀಯರಿಗೆ ನೀಡುವ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.

ವಿದೇಶಿಯರಿಗಿಲ್ಲ ಅವಕಾಶ
ರವಿಶಾಸ್ತ್ರೀ ಗರಡಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಕೊಹ್ಲಿ-ಶಾಸ್ತ್ರೀ ನಡುವಿನ ಹೊಂದಾಣಿಕೆ ಕೂಡಾ ಚೆನ್ನಾಗಿದೆ. ಹೀಗಾಗಿ ಕೋಚ್‌ ಬದಲಿಸುವ ಕೆಲಸಕ್ಕೆ ಕೈ ಹಾಕುವ ಅವಶ್ಯಕತೆ ಇಲ್ಲ ಎಂದು ಸಿಎಸಿ ಮೂಲಗಳು ತಿಳಿಸಿವೆ.

ಗ್ಯಾರಿ ಕರ್ಸ್ಟನ್‌ ಅವರಷ್ಟೇ ಶ್ರೇಷ್ಠ ಕ್ರಿಕೆಟಿಗರು ಕೋಚ್‌ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನೂ ಪರಿಶೀಲಿಸುತ್ತೇವೆ. ಆದರೆ ಸದ್ಯದ ಮಟ್ಟಿಗೆ ಭಾರತೀಯರನ್ನು ಮೊದಲು ಪರಿಗಣಿಸುವ ಕೊಡುವ ವಿಚಾರಕ್ಕೆ ಮೊದಲ ಆದ್ಯತೆ ನೀಡಲಿದ್ದೇವೆ ಎಂದವರು ಹೇಳಿದ್ದಾರೆ.

ಅವರ ಮಾತಿನ ದಾಟಿಯಿಂದ ಶಾಸ್ತ್ರೀಯೇ ಕೋಚ್‌ ಆಗಿ ಮುಂದುವರಿಯುವುದು ಬಹುತೇಕ ಖಚಿತವಾಗಿರುವಂತೆ ಕಾಣಿಸುತ್ತಿದೆ. ಕೆಲ ದಿನಗಳ ಹಿಂದೆ ಓರ್ವ ಬಿಸಿಸಿಐ ಅಧಿಕಾರಿಯೂ ಶಾಸ್ತ್ರೀಯೇ ಕೋಚ್‌ ಆಗಿ ಮುಂದುವರಿಯಬೇಕೆಂದು ಅಭಿಪ್ರಾ ಯಪಟ್ಟಿದ್ದರು. ತಂಡವೀಗ ಸ್ಥಿತ್ಯಂತರದ ಘಟ್ಟದಲ್ಲಿದ್ದು. ಈ ಸಂದರ್ಭದಲ್ಲಿ ಕೋಚ್‌ ಬದಲಾಯಿಸಿದರೆ ಪ್ರತಿಕೂಲ ಪರಿಣಾಮವಾಗಬಹುದು ಎಂದು ಅವರು ಇದಕ್ಕೆ ಕೊಟ್ಟಿರುವ ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next