Advertisement

ಸುಪ್ರೀಂ ಆದೇಶ ಪಾಲಿಸದೆ ನ್ಯಾಯಾಂಗ ನಿಂದನೆ: ನಾಯ್ಕ

07:24 PM May 08, 2021 | Team Udayavani |

ಶಿರಸಿ: ರಾಜ್ಯ ಸರಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫೀಡಾವಿಟ್‌ನಂತೆ 18 ತಿಂಗಳಿನಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿನ ಅರ್ಜಿ ವಿಲೇವಾರಿ ಮಾಡಲು ವಿಫಲವಾಗಿ, ಸುಪ್ರೀಂ ಕೋರ್ಟಿನ ನಿರ್ದೇಶನ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂ ಕೋರ್ಟಿನ ಆದೇಶ ಅಮಾನ್ಯ ಮಾಡಿರುವುದರಿಂದ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆರೋಪಿಸಿದ್ದಾರೆ.

Advertisement

ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾಗಿರುವ ಅತಿಕ್ರಮಣ ದಾರರನ್ನ ಹೋರಹಾಕಬೇಕೆಂಬ ಪರಿಹಾರ ಕೇಳಿ ಸುಪ್ರೀಂ ಕೋರ್ಟ್‌ ದೆಹಲಿಯಲ್ಲಿ ಪರಿಸರ ವಾದಿಗಳು 2008 ರಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಮಧ್ಯಂತರ ತಡೆ ಆಜ್ಞೆಗೆ ನೀಡಿದ ನಿರ್ದೇಶನದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳು ಜುಲೈ 9, 2019 ರಂದು ಸುಪ್ರೀಂ ಕೊರ್ಟಿಗೆ ಅರ್ಜಿಗಳ ವಿಲೇವಾರಿಗೆ 18 ತಿಂಗಳ ಕಾಲಾವಕಾಶ ಕೋರಿ ಅಫೀಡಾವಿಟ್‌ ಸಲ್ಲಿಸಿದ್ದರು.

ಸರಕಾರವು ತಾವೇ ಸಲ್ಲಿಸಿದ ಅಫೀಡಾವಿಟ್‌ನಂತೆ ಸುಪ್ರೀಂ ಕೋರ್ಟಿನ ನಿರ್ದೇಶನ ಮೀರಿರುವುದರಿಂದ ನ್ಯಾಯಾಲಯ ನಿಂದನೆಗೆ ಕಾರಣ ಆಗುವುದೆಂದು ಅವರು ವಿಶ್ಲೇಷಿಸುತ್ತಾ, ರಾಜ್ಯಾದ್ಯಂತ ಇಂದಿನವರೆಗೆ ಶೇ.5 ರಷ್ಟು ಅರ್ಜಿಗಳು ವಿಲೇವಾರಿ ಆಗದಿರುವುದಿಲ್ಲವೆಂದು ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.

ಅರ್ಜಿಗಳನ್ನು ಪುನರ್‌ ಪರಿಶೀಲಿಸುವಾಗ ತೀರಸ್ಕರಿಸಿರುವ ಎಲ್ಲಾ ಅರ್ಜಿಗಳನ್ನು ತೀರಸ್ಕರಿಸಿದ ಸಮಿತಿಯೇ ಪುನರ್‌ ಪರಿಶೀಲನೆ ಮಾಡತಕ್ಕದ್ದು, ಅರ್ಜಿದಾರರಿಗೆ ಸಾಕ್ಷಿಗಳ ಬಗ್ಗೆ ಮಾರ್ಗದರ್ಶನ ಮತ್ತು ಅವಹಾಲು ಸಲ್ಲಿಸಲು ಸಾಕಷ್ಟು ಅವಕಾಶ ಕಲ್ಪಿಸುವುದು, ತೀರಸ್ಕರಿಸಲ್ಪಟ್ಟ ಅರ್ಜಿಗಳನ್ನ ಪುನಃ ನೈಸರ್ಗಿಕ ನ್ಯಾಯ ನಿಯಮಗಳನ್ವಯ ಅಂತಹ ಅರ್ಜಿಗಳನ್ನು ಪುನರ್‌ ಪರಿಶೀಲಿಸುವುದು, ಮನೆ ನಿರ್ಮಿಸಿಕೊಂಡು ವಾಸವಿರುವ ಪ್ರಕರಣಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಪರಿಶೀಲಿಸುವುದು, ಮುಂತಾದ ನಿಯಮಗಳನ್ನು ನಿರ್ಧರಿಸಲ್ಪಟ್ಟು ಈ ನಿಯಮಾವಳಿ ಅಡಿಯಲ್ಲಿಯೇ ಅರ್ಜಿಗಳನ್ನು ಪುನರ್‌ ಪರಿಶೀಲಿಸಲು ಅರಣ್ಯ ಹಕ್ಕು ಸಮಿತಿಗಳಿಗೆ ಕೇಂದ್ರ ಬುಡಕಟ್ಟು ಮಂತ್ರಾಲಯ ನಿರ್ದೇಶನ ನೀಡಿತ್ತು ಎಂಬುದನ್ನು ಇಲಾಖೆ ಪತ್ರದ ದಾಖಲೆಯಲ್ಲಿ ಉಲ್ಲೇಖೀಸಲ್ಪಟ್ಟಿದೆ.

ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರ ಜನವರಿ 2021ರ ಒಳಗೆ ಅರ್ಜಿ ವಿಲೇವಾರಿ ಮಾಡುತ್ತೇವೆ ಎಂದು ಅಫೀಡಾವಿಟ್‌ ಸಲ್ಲಿಸಿ, ಈಗ ಮಾತು ತಪ್ಪಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next