ಕ್ರೈಸ್ಟ್ ಚರ್ಚ್: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅದ್ಭುತ ಫೀಲ್ಡರ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಿವೀಸ್ ವಿರುದ್ಧ ಜಡೇಜಾ ಹಿಡಿದಿರುವ ಅದ್ಭುತ ಕ್ಯಾಚ್ ಈಗ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದೆ.
ಕಿವೀಸ್ ಇನ್ನಿಂಗ್ಸ್ ಅಂತ್ಯದಲ್ಲಿ ನೀಲ್ ವ್ಯಾಗ್ನರ್ ಬಾರಿಸಿದ ಚೆಂಡು ಇನ್ನೇನು ಸಿಕ್ಸರ್ ಗೆ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಅದರೆ ಡೀಪ್ ಸ್ಕ್ವಾರ್ ನಲ್ಲಿದ್ದ ಜಡೇಜಾ ಹಕ್ಕಿಯಂತೆ ಹಾರಿ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದರು. ಜಡೇಜಾ ಅದ್ಭುತ ಕ್ಯಾಚ್ ಗೆ ಭಾರತೀಯ ಆಟಗಾರರೇ ಆಶ್ಚರ್ಯಗೊಂಡಿದ್ದರು.
“ಇದು ಕ್ರಿಕೆಟ್ ಇತಿಹಾಸದ ಅದ್ಭುತ ಕ್ಯಾಚ್ ಗಳಲ್ಲಿ ಒಂದು” ಎಂದು ಕಾಮೆಂಟರಿ ಮಾಡುತ್ತಿದ್ದ ಇಯಾನ್ ಸ್ಮಿತ್ ಹೇಳಿದ ಮಾತು.
ಇನ್ನಿಂಗ್ಸ್ ನ ನಂತರ ಮಾತನಾಡಿದ ಜಡೇಜಾ, ವ್ಯಾಗ್ನರ್ ಡೀಪ್ ಸ್ಕ್ವಾರ್ ಲೆಗ್ ಗೆ ಬಾರಿಸುತ್ತಾನೆ ಎಂದು ಮೊದಲೇ ಅಂದಾಜು ಮಾಡಿದ್ದೆ. ಆದರೆ ಅಷ್ಟು ವೇಗದಲ್ಲಿ ಚೆಂಡು ಬರುಬಹುದು ಎಂದುಕೊಂಡಿರಲಿಲ್ಲ. ವೇಗವಾಗಿ ಓಡಿ ಹಾರಿದೆ. ಚೆಂಡನ್ನು ಹಿಡಿದಾಗ ಗೊತ್ತೇ ಆಗಲಿಲ್ಲ ಎಂದರು.