ದುಬೈ: ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಅಸಾಮಾನ್ಯ ಸಾಧನೆ ತೋರಿದ ರವೀಂದ್ರ ಜಡೇಜಾ ಅವರು ಆಲ್ ರೌಂಡರ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಟೆಸ್ಟ್ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಜಡೇಜಾ ಎರಡು ಸ್ಥಾನ ಮೇಲೇರಿ ಮೊದಲ ಶ್ರೇಯಾಂಕ ಪಡೆದಿದ್ದಾರೆ. ಜೇಸನ್ ಹೋಲ್ಡರ್ ಎರಡು ಮತ್ತು ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಮೊಹಾಲಿ ಪಂದ್ಯದಲ್ಲಿ ಜಡೇಜಾ 175 ರನ್ ಮತ್ತು 9 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.
ಬ್ಯಾಟಿಂಗ್ ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ಸ್ಥಾನ ಪ್ರಗತಿ ಸಾಧಿಸಿ ಐದನೇ ಶ್ರೇಯಾಂಕ ಪಡೆದಿದ್ದಾರೆ. ಐದನೇ ಶ್ರೇಯಾಂಕದಲ್ಲಿದ್ದ ರೋಹಿತ್ ಶರ್ಮಾ ಒಂದು ಸ್ಥಾನದ ಹಿನ್ನಡೆ ಅನುಭವಿಸಿದ್ದಾರೆ. ಮೊಹಾಲಿ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ರಿಷಭ್ ಪಂತ್ ಒಂದು ಸ್ಥಾನ ಪ್ರಗತಿ ಕಂಡು ಹತ್ತನೇ ಶ್ರೇಯಾಂಕ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಆಸೀಸ್ ನ ಮಾರ್ನಸ್ ಲಬುಶೇನ್ ಮುಂದುವರಿದಿದ್ದಾರೆ.
ಇದನ್ನೂ ಓದಿ:ಒಂದು ಟಿಕೆಟ್‌ಗೆ ಮತ್ತೂಂದು ಟಿಕೆಟ್ ಫ್ರೀ: ವಂಡರ್‌ಲಾದಲ್ಲಿ ಮಹಿಳೆಯರ ನೂಕುನುಗ್ಗಲು
ಬೌಲರ್ ಗಳ ಪಟ್ಟಿಯಲ್ಲಿ ಅಗ್ರ ಹತ್ತರ ಶ್ರೇಯಾಂಕದಲ್ಲಿ ಅಶ್ವಿನ್ ಮತ್ತು ಬುಮ್ರಾ ಮುಂದುವರಿದಿದ್ದಾರೆ. ಅಶ್ವಿನ್ ಎರಡನೇ ಸ್ಥಾನದಲ್ಲಿದ್ದರೆ, ಬುಮ್ರಾ ಹತ್ತನೇ ಸ್ಥಾನದಲ್ಲಿದ್ದಾರೆ.