Advertisement

ದೇಗುಲ ಕೆಡವಿದ್ದಕ್ಕೆ ಭಾರಿ ಪ್ರತಿಭಟನೆ: ಹಿಂಸಾಚಾರ

01:17 AM Aug 23, 2019 | mahesh |

ನವದೆಹಲಿ: ದೆಹಲಿಯ ತುಘಲಕಾಬಾದ್‌ನಲ್ಲಿನ ಸಂತ ರವಿದಾಸರ ದೇಗುಲವನ್ನು ಸುಪ್ರೀಂಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಕೆಡವಿದ್ದಕ್ಕೆ ಭಾರಿ ಪ್ರತಿಭಟನೆ ನಡೆದಿದ್ದು, ಬುಧವಾರ ರಾತ್ರಿ ಪ್ರತಿಭಟನಾಕಾರರು ನಗರದ ಹಲವೆಡೆ ಹಿಂಸಾಚಾರಕ್ಕೂ ಇಳಿದಿದ್ದಾರೆ. ಬುಧವಾರ ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ ಹಾಗೂ ಇತರ ರಾಜ್ಯಗಳ ಲಕ್ಷಗಟ್ಟಲೆ ಜನರು ಆಗಮಿಸಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದರು.

Advertisement

ಪ್ರತಿಭಟನೆ ಶಾಂತಿಯುತವಾಗಿಯೇ ನಡೆಯಿತಾದರೂ ರಾತ್ರಿ ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಅಯೋಧ್ಯೆಯಿಂದ ರಾಮ ಮಂದಿರವನ್ನು ಬೇರೆಡೆಗೆ ಸ್ಥಳಾಂತರಿಸಲು ಒಪ್ಪುವುದಿಲ್ಲವಾದರೆ, 500 ವರ್ಷ ಹಳೆಯ ರವಿದಾಸ ದೇಗುಲವನ್ನು ಯಾಕೆ ಸ್ಥಳಾಂತರಿಸಬೇಕು ಎಂದು ಅಖೀಲ ಭಾರತ ಅಂಬೇಡ್ಕರ್‌ ಮಹಾಸಭೆಯ ಅಧ್ಯಕ್ಷ ರಾಕೇಶ್‌ ಬಹಾದುರ್‌ ಪ್ರಶ್ನಿಸಿದ್ದಾರೆ. ಅಲ್ಲದೆ, ಸಂತ ರವಿದಾಸರು 30 ಕೋಟಿ ಹಿಂದುಳಿದ ಜನರಿಗೆ ಗುರು. ಹಿಂದುಳಿದ ಸಮುದಾಯದವರು ಇವರ ಬೋಧನೆಗಳನ್ನು ಅನುಸರಿಸುತ್ತಿದ್ದಾರೆ. ಈ ದೇಗುಲ ಸ್ಥಳಾಂತರಿಸುವುದು ಸರಿಯಲ್ಲ ಎಂದು ದಲಿತ ಬಹುಜನ ಸಮೂಹದ ಹೋರಾಟಗಾರ ಬಿನೋಯ್‌ ಕೊರಿವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next