Advertisement

ರವಿಚಂದ್ರನ್‌ ಅಭಿನಯದ ‘ರವಿ ಬೋಪಣ್ಣ’ಆ. 12ಕ್ಕೆ ತೆರೆಗೆ

11:35 AM Jul 19, 2022 | Team Udayavani |

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ರವಿ ಬೋಪಣ್ಣ’ ಸಿನಿಮಾದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಅಂದಹಾಗೆ, ರವಿಚಂದ್ರನ್‌ ನಟನೆ ಮತ್ತು ನಿರ್ದೇಶನದ “ರವಿ ಬೋಪಣ್ಣ’ ಸಿನಿಮಾ ಇದೇ, ಆಗಸ್ಟ್‌ 12ಕ್ಕೆ ತೆರೆಗೆ ಬರುತ್ತಿದೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಂಡಿರುವ ನಟ ಕಂ ನಿರ್ದೇಶಕ ರವಿಚಂದ್ರನ್‌, “ನಿಮ್ಮ ಈಶ್ವರಿಗೆ 50 ವರ್ಷಗಳು… ಈ ನಿಮ್ಮ ಪ್ರೀತಿಗೆ ಕೊಡುಗೆಯಾಗಿ “ರವಿ ಬೋಪಣ್ಣ’ ಆ. 12ಕ್ಕೆ ನಿಮ್ಮ ಮುಂದೆ… ಜೊತೆಯಾಗಿ ಸಂಭ್ರಮಿಸೋಣವೇ…’ ಎಂದಿದ್ದಾರೆ.

“ರವಿ ಬೋಪಣ್ಣ’ ಚಿತ್ರಕ್ಕೆ ರವಿಚಂದ್ರನ್‌ ಅವರೇ ಚಿತ್ರಕಥೆ, ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸಂಕಲನ ಕಾರ್ಯವನ್ನು ಕೂಡ ಸ್ವತಃ ರವಿಚಂದ್ರನ್‌ ಅವರೇ ನಿರ್ವಹಿಸಿದ್ದು, ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. “ಈಶ್ವರಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರವಿ ಬೋಪಣ್ಣ’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್‌ ಕೂಡ ಕಾಣಿಸಿಕೊಂಡಿದ್ದಾರೆ.

ಈಗಾಗಲೇ “ರವಿ ಬೋಪಣ್ಣ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ರವಿ ಬೋಪಣ್ಣ’ ತೆರೆಮೇಲೆ ಹೇಗಿರಲಿದ್ದಾನೆ ಅನ್ನೋದು ಅಗಸ್ಟ್‌ 12ಕ್ಕೆ ಗೊತ್ತಾಗಲಿದೆ

Advertisement

Udayavani is now on Telegram. Click here to join our channel and stay updated with the latest news.

Next