Advertisement

ಜಟ್ಟ ಗಿರಿರಾಜ್ ಚಿತ್ರದಲ್ಲಿ ರವಿಚಂದ್ರನ್

04:06 AM Jun 07, 2020 | Lakshmi GovindaRaj |

ರವಿಚಂದ್ರನ್ ಅವರ ಹೊಸ ಸಿನಿಮಾದ ಕುರಿತಾದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಜಟ್ಟ ಗಿರಿರಾಜ್ ನಿರ್ದೇಶನದಲ್ಲಿ ರವಿಚಂದ್ರನ್ ಅವರು ನಟಿಸಲಿದ್ದಾರಂತೆ. ಈಗಾಗಲೇ ಮಾತುಕತೆ ಕೂಡಾ ಮುಗಿದು ಹೋಗಿದೆ. ಇದು ಹೊಸ ಬಗೆಯ ಕಥೆಯಾಗಿದ್ದು, ರವಿಚಂದ್ರನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದಲ್ಲಿ ನಡೆಯುವ ಕಥೆಯಂತೆ. ಹಾಗಾಗಿ ಈ ಚಿತ್ರದ ಕುರಿತು ಸಾಕಷ್ಟು ರೀಸರ್ಚ್ ಮಾಡುವ ಅಗತ್ಯವಿದೆಯಂತೆ.

Advertisement

ಸದ್ಯ ಮಾತುಕತೆ ಅಂತಿಮವಾಗಿದ್ದು, ಸಿನಿಮಾ ಯಾವಾಗ ಶುರುವಾಗುತ್ತದೆ ಎಂಬುದುರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.  ಈ ನಡುವೆಯೇ ರವಿಚಂದ್ರನ್ ಅವರ ಪುತ್ರನ ಸಿನಿಮಾವನ್ನು ನಿರ್ದೇಶನ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ನಟ-ನಿರ್ದೇಶಕ-ನಿರ್ಮಾಪಕ, ಅಭಿಮಾನಿಗಳ ಕ್ರೇಜಿ ಸ್ಟಾರ್ ತಮ್ಮ ಪುತ್ರನಿಗಾಗಿ ಸ್ಕ್ರಿಪ್ಟ್‍ನ ತಯಾರಿ ನಡೆಸಲು ಲಾಕ್‍ಡೌನ್ ಸಮಯವನ್ನು ಬಳಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರವಿಚಂದ್ರನ ಜತೆಗೆ ಅವರ ಎರಡನೇ ಮಗನಾದ ವಿಕ್ರಂ ರವಿಚಂದ್ರನ್ ತೆರೆಯ ಮೇಲೆ ಕಾಣಿಸಲಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಎಡಿಟ್ ಡೆಸ್ಕ್‍ನಲ್ಲಿ ನಿರತರಾಗಿರುವ ಹಿರಿಯ ನಟ ಚಿತ್ರಕಥೆಯ ಬಗ್ಗೆ ಸುಳಿವು ನೀಡಿಲ್ಲ.ನಾನು ರವಿ ಬೋಪಣ್ಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಈ ನಡುವೆ ಮೂರು ಸ್ಕ್ರಿಪ್ಟ್‍ಗಳನ್ನು ಪೂರ್ಣಗೊಳಿಸಿದೆ. ಒಂದು ಚಿತ್ರದಲ್ಲಿ ತಂದೆ ಮತ್ತು ಮಗ ಒಟ್ಟಿಗೆಸೇರಲಿದ್ದೇವೆ.

ನಾನು ಹಾಗೂ ವಿಕ್ರಮ್ ಆ ಚಿತ್ರದಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರ ನಿರ್ದೇಶನ ನನ್ನದೇ ಆಗಿರಲಿದೆ ಎಂದಿದ್ದಾರೆ. “ಇದು ನನ್ನ ಕಡೆಯಿಂದ ಇನ್ನೊಂದು ವಿಶಿಷ್ಟ ಪ್ರಯತ್ನವಾಗಿದೆ. ವಿನೂತನ ಚಿತ್ರಕಥೆಯನ್ನಿದು ಹೊಂದಿರಲಿದೆ. ರಾಜ್ಯವು ಲಾಕ್ ಡೌನ್ ನಿಂದ ಹೊರಬಂದ ನಂತರ ನಾನು ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇನೆ” ರವಿಚಂದ್ರನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next