Advertisement

ಹೆರಾತ್, ಕಪಿಲ್ ದೇವ್ ದಾಖಲೆ ಮುರಿದು ಹೊಸ ಎತ್ತರ ಏರಿದ ರವಿಚಂದ್ರನ್ ಅಶ್ವಿನ್

03:00 PM Mar 06, 2022 | Team Udayavani |

ಮೊಹಾಲಿ: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಒಂದೇ ಪಂದ್ಯದಲ್ಲಿ ಮೂವರು ದಿಗ್ಗಜರ ದಾಖಲೆ ಮುರಿದು ಹೊಸ ಎತ್ತರ ಏರಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಭಾರತೀಯರ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನಕ್ಕೇರಿದ್ದಾರೆ.

Advertisement

ಲಂಕಾದ ಅಸಲಂಕಾ ವಿಕೆಟ್ ಕಿತ್ತ ಅಶ್ವಿನ್ ಟೆಸ್ಟ್ ಮಾದರಿಯಲ್ಲಿ 435ನೇ ವಿಕೆಟ್ ಪಡೆದರು. ಇದರೊಂದಿಗೆ ಮಾಜಿ ನಾಯಕ ಕಪಿಲ್ ದೇವ್ ಅರ 434 ವಿಕೆಟ್ ದಾಖಲೆಯನ್ನು ಅಶ್ವಿನ್ ಹಿಂದಿಕ್ಕಿದರು. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಭಾರತೀಯನೆನಿಸಿದರು.

ಇದನ್ನೂ ಓದಿ:ಬ್ಯಾಟಿಂಗ್ ನಂತರ ಬೌಲಿಂಗ್ ನಲ್ಲೂ ಜಡೇಜಾ ಮಿಂಚು; 400 ರನ್ ಹಿನ್ನಡೆ ಅನುಭವಿಸಿದ ಲಂಕಾ!

ಒಟ್ಟಾರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅಶ್ವಿನ್ 12ನೇ ಸ್ಥಾನದಲ್ಲಿದ್ದರು. ರಿಚರ್ಡ್ ಹ್ಯಾಡ್ಲಿ (431), ರಂಗನಾ ಹೆರಾತ್ (432), ಮತ್ತು ಕಪಿಲ್ ದೇವ್ (434) ದಾಖಲೆ ಮುರಿದ ಅಶ್ವಿನ್ 9ನೇ ಸ್ಥಾನಕ್ಕೇರಿದ್ದಾರೆ.

ಅತೀ ಹೆಚ್ಚು ವಿಕೆಟ್ ಪಡೆದವರು

Advertisement

ಮುತ್ತಯ್ಯ ಮುರಳೀಧರನ್ – 133 ಟೆಸ್ಟ್‌ಗಳಲ್ಲಿ 800 ವಿಕೆಟ್

ಶೇನ್ ವಾರ್ನ್ – 145 ಟೆಸ್ಟ್‌ಗಳಲ್ಲಿ 708

ಜೇಮ್ಸ್ ಆಂಡರ್ಸನ್ – 169 ಟೆಸ್ಟ್‌ಗಳಲ್ಲಿ 640

ಅನಿಲ್ ಕುಂಬ್ಳೆ – 132 ಟೆಸ್ಟ್‌ಗಳಲ್ಲಿ 619

ಗ್ಲೆನ್ ಮೆಕ್‌ಗ್ರಾತ್ – 124 ಟೆಸ್ಟ್‌ಗಳಲ್ಲಿ 563

ಸ್ಟುವರ್ಟ್ ಬ್ರಾಡ್ – 152 ಟೆಸ್ಟ್‌ಗಳಲ್ಲಿ 537

ಕರ್ಟ್ನಿ ವಾಲ್ಷ್ – 132 ಟೆಸ್ಟ್‌ಗಳಲ್ಲಿ 519

ಡೇಲ್ ಸ್ಟೇನ್ – 93 ಟೆಸ್ಟ್‌ಗಳಲ್ಲಿ 439

ಆರ್ ಅಶ್ವಿನ್ – 85 ಟೆಸ್ಟ್‌ಗಳಲ್ಲಿ 435*

Advertisement

Udayavani is now on Telegram. Click here to join our channel and stay updated with the latest news.

Next