ಬೆಂಗಳೂರು : ಐಟಿ ದಿಗ್ಗಜ ಸಂಸ್ಥೆ ಎನಿಸಿರುವ ಇನ್‌ಫೋಸಿಸ್ ನ ಸಹ ಅಧ್ಯಕ್ಷರನ್ನಾಗಿ ರವಿ ವೆಂಕಟೇಶನ್ ಅವರನ್ನು ನೇಮಕ ಮಾಡಲಾಗಿದೆ.
ವೆಂಕಟೇಶನ್ ಅವರ ನೇಮಕಾತಿಯಿಂದ ಸಂಸ್ಥೆಯ ಸಂಸ್ಥಾಪಕರನ್ನು ಸರ್ವ ರೀತಿಯಲ್ಲೂ ತೃಪ್ತಿ ಪಡಿಸುವುದಕ್ಕೆ ಸಾಧ್ಯವಾದೀತೆಂದು ತಿಳಿಯಲಾಗಿದೆ. ಆ ಉದ್ದೇಶಕ್ಕಾಗಿಯೇ ಅವರ ನೇಮಕಾತಿ ನಡೆದಿದೆ ಎಂದು ಶೇರುದಾರ ಸಲಹಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ವೆಂಕಟೇಶನ್ ಅವರು ಈ ಮೊದಲು ಮೈಕ್ರೋಸಾಫ್ಟ್ ಇಂಡಿಯಾ ಇದರ ಅಧ್ಯಕ್ಷರಾಗಿದ್ದವರು. ಪ್ರಕೃತ ಅವರು ಬ್ಯಾಂಕ್ ಆಫ್ ಬರೋಡ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ಇನ್‌ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಕಂಪೆನಿ ಕುರಿತ ಬಹುತೇಕ ಎಲ್ಲ ಕಳಕಳಿಗಳಿಗೆ ವೆಂಕಟೇಶನ್ ನೇಮಕಾತಿಯಿಂದ ಉತ್ತರ ದೊಕಿತೇಂದು ನಾನು ಹಾರೈಸುತ್ತೇನೆ’ ಎಂದು ಶೇರುದಾರರ ಸಲಹಾ ಸಂಸ್ಥೆ ಇನ್ ಗವರ್ನ್ ಇದರ ಆಡಳಿತ ನಿರ್ದೇಶಕರಾಗಿರುವ ಶ್ರೀರಾಮ್ ಸುಬ್ರಮಣಿಯನ್ ಹೇಳಿದ್ದಾರೆ.
ಆದರೆ ವೆಂಕಟೇಶನ್ ಅವರು ನಿರ್ವಹಿಸಲಿರುವ ಸಹ-ಅಧ್ಯಕ್ಷ ಪದದ ಅಧಿಕಾರ ಹಾಗೂ ಕಾರ್ಯವ್ಯಾಪ್ತಿ ಏನೆಂಬುದನ್ನು ಅವರು ವ್ಯಾಖ್ಯಾನಿಸಿಲ್ಲ.