Advertisement

KGF ನಂತಹ ಸಿನಿಮಾ ಸಿಕ್ಕಿದ್ದು ಯಶ್‌ ಅದೃಷ್ಟ..ರವಿತೇಜ ಮಾತಿಗೆ ಗರಂ ಆದ ರಾಕಿಭಾಯ್‌ ಫ್ಯಾನ್ಸ್

03:07 PM Oct 11, 2023 | Team Udayavani |

ಹೈದರಾಬಾದ್: ಟಾಲಿವುಡ್‌ ನಟ ಮಾಸ್‌ ಮಹಾರಾಜ ರವಿತೇಜ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬಗ್ಗೆ ಹೇಳಿರುವ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಯಶ್‌ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

Advertisement

ರವಿತೇಜ ವೃತ್ತಿ ಬದುಕಿನ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ʼಟೈಗರ್‌ ನಾಗೇಶ್ವರರಾವ್‌ʼ ಚಿತ್ರದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ.

ಪ್ರಚಾರದ ಅಂಗವಾಗಿ ನಟ ರವಿತೇಜ ಅವರು ವೆಬ್‌ ಸೈಟ್‌ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಶ್‌ ಬಗ್ಗೆ ಆಡಿರುವ ಮಾತು ರಾಕಿಭಾಯ್‌ ಫ್ಯಾನ್ಸ್‌ ಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಂದರ್ಶನದಲ್ಲಿ ರ‍್ಯಾಪಿಡ್‌ ಫೈಯರ್‌ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ನಟರ ಬಗ್ಗೆ ಕೇಳಿ ಅಭಿಪ್ರಾಯವನ್ನು ಕೇಳಿದ್ದಾರೆ.

ಇದನ್ನೂ ಓದಿ: Shocking Video: ಚಲಿಸುತ್ತಿರುವ ರೈಲಿನ ಮೇಲೆ ಯುವಕನ ಅಪಾಯಕಾರಿ ಸ್ಟಂಟ್

Advertisement

ಮೊದಲಿಗೆ ರಾಮ್‌ ಚರಣ್‌ ಅವರಿಂದ ನೀವೇನು ಪಡೆಯುತ್ತೀರಾ ಎಂದಿದ್ದಾರೆ, “ರಾಮ್ ಚರಣ್‌ ರಿಂದ ಡ್ಯಾನ್ಸ್‌, ಅವರೊಬ್ಬ ಸೂಪರ್ ಡ್ಯಾನ್ಸರ್‌” ಎಂದಿದ್ದಾರೆ. ಪ್ರಭಾಸ್‌ ಬಗ್ಗೆ ಕೇಳಿದಾಗ “ಅವರೆಂದರೆ ಅಪಿಯರೆನ್ಸ್” ಮತ್ತು ಅವರು ಡಾರ್ಲಿಂಗ್‌ ಎಂದಿದ್ದಾರೆ. ರಾಜಾಮೌಳಿ ಅವರು ವಿಷನ್‌ ಎಂದಿದ್ದಾರೆ. ದಳಪತಿ ವಿಜಯ್‌ ಅವರು ಕೂಡ ಒಬ್ಬ ಅದ್ಭುತ ಡ್ಯಾನ್ಸರ್‌ ಎಂದು ರವಿತೇಜ ಹೇಳಿದ್ದಾರೆ.

ಇದಾದ ಬಳಿಕ ಯಶ್‌ ಬಗ್ಗೆ ಕೇಳಿದಾಗ ರವಿತೇಜ ಅವರು, “ಯಶ್‌ ಅವರದು ನಾನು ಕೆಜಿಎಫ್‌ ಮಾತ್ರ ನೋಡಿದ್ದೇನೆ. ಕೆಜಿಎಫ್‌ ನಂತಹ ಸಿನಿಮಾಗಳು ಸಿಗುವುದು ತುಂಬಾ ಅದೃಷ್ಟವೆಂದು”ಹೇಳಿದ್ದಾರೆ.

ಯಶ್‌ ಅವರ ಬಗ್ಗೆ ರವಿತೇಜ ಹೇಳಿದ ರೀತಿ ಒಂದು ಬಗೆಯಲ್ಲಿ ಉಡಾಫೆಯ ವರ್ತನೆದಂತಿತ್ತು ಎಂದು ರಾಕಿಭಾಯ್‌ ಅಭಿಮಾನಿಗಳು ಮಾಸ್‌ ಮಹಾರಾಜನ ವಿರುದ್ಧ ಗರಂ ಆಗಿದ್ದಾರೆ.

ಯಶ್‌ ಬಾಸ್‌ ತಮ್ಮ 6 ವರ್ಷಗಳನ್ನು ಫ್ರಾಂಚೈಸಿಗೆ ಮೀಸಲಿಟ್ಟರು. ಸಿನಿಮಾ ನಿರ್ಮಾಣದ ಎಲ್ಲ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾಗೆ ಕೊಂಡೊಯ್ದದ್ದು ಅವರೇ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.

ರಾಜಮೌಳಿ ಅವರ ʼ ವಿಕ್ರಮಾರ್ಕುಡುʼ ಲಾಟರಿ ಇಲ್ಲದಿದ್ದರೆ ಇವರು ಯಾರೆಂದು ಗೊತ್ತಾಗುತ್ತಿರಲಿಲ್ಲ. “ಅದೃಷ್ಟ” ಎಂಬ ಒಂದೇ ಪದದಿಂದ ಒಬ್ಬ ನಟನ ಯಶಸ್ಸಿನ ಪರಿಶ್ರಮವನ್ನು ದೋಷಿಸುವುದು ಸರಿಯಲ್ಲ.  ಅವರ ರಾಜ್ಯದಲ್ಲಿ 100 ಕೋಟಿಯ ಒಂದು ಪಾಲು ಕೂಡ ಇಲ್ಲ. ಯಶ್‌ ಆಂಧ್ರ ಹಾಗೂ ತೆಲಂಗಾಣದಲ್ಲಿ 100 ಕೋಟಿ ಮಾಡಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಸದ್ಯ ರವಿತೇಜ ಅವರ ಈ ಹೇಳಿಕೆ ವೈರಲ್‌ ಆಗುವುದರ ಜೊತೆಗೆ ಕರ್ನಾಟಕದಲ್ಲಿ ಅವರ ಸಿನಿಮಾವನ್ನು ಬ್ಯಾನ್‌ ಮಾಡಬೇಕೆಂದು ಕೆಲವರು ಆಗ್ರಹಿಸಿದ್ದಾರೆ. ಶಿವರಾಜ್‌ ಕುಮಾರ್‌ ʼಘೋಸ್ಟ್‌ʼ ಸಿನಿಮಾ ಅ.19 ರಂದು ರಿಲೀಸ್‌ ಆಗಲಿದ್ದು, ಅ.20 ರಂದು ʼ ʼಟೈಗರ್‌ ನಾಗೇಶ್ವರರಾವ್‌ʼ ಸಿನಿಮಾ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next