Advertisement

BCCI ಪ್ರಶಸ್ತಿಗೆ ಪಾತ್ರರಾದ ರವಿಶಾಸ್ತ್ರಿ, ಶುಭಮನ್‌ ಗಿಲ್‌

11:04 PM Jan 22, 2024 | Team Udayavani |

ಹೈದರಾಬಾದ್‌: ಟೀಮ್‌ ಇಂಡಿಯಾದ ಮಾಜಿ ಆಲ್‌ರೌಂಡರ್‌ ಹಾಗೂ ಕೋಚ್‌ ರವಿಶಾಸ್ತ್ರಿ ಬಿಸಿಸಿಐ ನೀಡಲಿರುವ ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶುಭಮನ್‌ ಗಿಲ್‌ 2023ರ “ವರ್ಷದ ಕ್ರಿಕೆಟಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಮಂಗಳವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 2019ರ ಬಳಿಕ ಮೊದಲ ಬಾರಿಗೆ ಬಿಸಿಸಿಐ ಈ ಪ್ರಶಸ್ತಿ ಸಮಾರಂಭ ನಡೆಸುತ್ತಿದೆ. ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ಆಟಗಾರರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

61 ವರ್ಷದ ರವಿಶಾಸ್ತ್ರಿ 80 ಟೆಸ್ಟ್‌ ಹಾಗೂ 150 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಕಮೆಂಟ್ರಿ ಮೂಲಕವೂ ಜನಪ್ರಿಯತೆ ಗಳಿಸಿದ್ದಾರೆ. ಎರಡು ಸಲ ಟೀಮ್‌ ಇಂಡಿಯಾದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ್ದಾರೆ. 2014- 2016ರ ಆವಧಿಯಲ್ಲಿ ತಂಡದ ನಿರ್ದೇಶಕರಾಗಿದ್ದರು. ಆಸ್ಟ್ರೇಲಿಯದಲ್ಲಿ ಸತತ 2 ಸಲ ಟೆಸ್ಟ್‌ ಸರಣಿ ಜಯಿಸಿದ್ದು ರವಿಶಾಸ್ತ್ರಿ ಅವರ ಯಶಸ್ಸಿಗೆ ಸಾಕ್ಷಿ.

ಶುಭಮನ್‌ ಗಿಲ್‌ ಏಕದಿನ ಕ್ರಿಕೆಟ್‌ನಲ್ಲಿ ಬಹಳ ಬೇಗ 5 ಸಾವಿರ ರನ್‌ ಹಾಗೂ 5 ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next